ಸೋಮವಾರ, ಮಾರ್ಚ್ 8, 2021
25 °C

ತೂಕ ಇಳಿಸಿಕೊಂಡಿರುವ ಅರ್ಜುನ್‌: ಮಲೈಕಾ ಪ್ರಶಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರ್ಜುನ್‌ ಕಪೂರ್‌ ಹಾಗೂ ಮಲೈಕಾ ಅರೋರಾ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಗುಸು ಗುಸು ಬಾಲಿವುಡ್‌ ಅಂಗಳದಲ್ಲಿ ಆರಂಭವಾದಾಗಿನಿಂದ ಅಭಿಮಾನಿಗಳು ಅವರನ್ನು ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದ್ದಾರೆ.

ತೂಕ ಇಳಿಸಿಕೊಂಡಿರುವುದಾಗಿ ಸರಣಿ ಚಿತ್ರಗಳನ್ನು ಹಾಕಿರುವ ಅರ್ಜುನ್‌ ಕಪೂರ್‌ ಅವರ ಟ್ವೀಟ್‌ಗೆ ಮಲೈಕಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಅವರ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ. ಅಲ್ಲದೇ ಮಸಾಲೆಭರಿತ ಸಂದೇಶಗಳೊಂದಿಗೆ ಇದನ್ನು ಶೇರ್‌ ಮಾಡುತ್ತಿದ್ದಾರೆ.

‘ಫೇಥ್‌ ಆ್ಯಂಡ್ ಹಾರ್ಡ್‌ ವರ್ಕ್‌ ಅರ್ಜುನ್‌’ ಎಂದು ಮಲೈಕಾ ಕಮೆಂಟ್ ಬರೆದಿದ್ದಾರೆ. ಅರ್ಜುನ್‌ ತಂಗಿ ಅಂಶುಲಾ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್‌ ತಿಂಗಳಿನಲ್ಲಿ ಚರ್ಚ್‌ನಲ್ಲಿ ಅರ್ಜುನ್‌ ಹಾಗೂ ಮಲೈಕಾ ಮದುವೆಯಾಗಿದ್ದಾರೆ ಎನ್ನುವ ವದಂತಿಗೆ ನಟ, ನಟಿ ಇಬ್ಬರೂ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅರ್ಬಾಜ್‌ ಖಾನ್‌ ಜೊತೆಗಿನ ವೈವಾಹಿಕ ಸಂಬಂಧದಿಂದ ವಿಚ್ಛೇದನ ಪಡೆದ ನಂತರ ಮಲೈಕಾ ಈಗ ಅರ್ಜುನ್ ಜೊತೆಗೆ ಓಡಾಡುವ ಮೂಲಕ ಕೆಲವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಇದೆಲ್ಲದರಿಂದ ತಲೆ ಕೆಡಿಸಿಕೊಳ್ಳದ ಜೋಡಿ ಮಾಧ್ಯಮಗಳ ಕಣ್ಣಿಗೆ ಒಟ್ಟಾಗಿ ಕಾಣಿಸಿಕೊಂಡು ಬೋಲ್ಡ್‌ ನಡೆಯನ್ನು ಪ್ರದರ್ಶಿಸುತ್ತಲೇ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು