ಬುಧವಾರ, ಜನವರಿ 22, 2020
25 °C

ಹಿಂದಿಗೆ ಹೊರಟು ನಿಂತ ‘ಅರ್ಜುನ್‌ ರೆಡ್ಡಿ’ ನಾಯಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲುಗು ಸೂಪರ್‌ ಡ್ಯೂಪರ್‌ ಹಿಟ್‌ ‘ಅರ್ಜುನ್‌ ರೆಡ್ಡಿ’ ಚಿತ್ರದ ನಾಯಕಿ ಶಾಲಿನಿ ಪಾಂಡೆ ಸದ್ಯದಲ್ಲೇ ಬಾಲಿವುಡ್‌ಗೆ ಕಾಲಿಡಲಿದ್ದಾರೆ. ಹಿಂದಿಯಲ್ಲಿ ತಯಾರಾಗುತ್ತಿರುವ ‘ಜಯೇಷ್‌ ಭಾಯ್‌ ಜೋರ್ದಾರ್‌’ ಚಿತ್ರದಲ್ಲಿ ರಣವೀರ್‌ ಸಿಂಗ್‌ಗೆ ನಾಯಕಿಯಾಗಿ ನಟಿಸಲಿದ್ದಾರೆ.

‘ಅರ್ಜುನ್‌ ರೆಡ್ಡಿ’ಯಂತಹ ಒಂದೇ ಹಿಟ್‌ ಚಿತ್ರದಿಂದ ರಾತ್ರಿ ಬೆಳಗಾಗುವ ಹೊತ್ತಿಗೆ ಖ್ಯಾತಿ ಪಡೆದ ಮುದ್ದು ಮೊಗದ ಚೆಲುವೆ ಶಾಲಿನಿ ಬಾಲಿವುಡ್‌ ಪಯಣ ಕೂಡ ಪ್ರತಿಷ್ಠಿತ ಯಶ್‌ರಾಜ್‌ ಫಿಲ್ಮ್ಸ್‌ ಮೂಲಕ ಭರ್ಜರಿಯಾಗಿ ಆರಂಭವಾಗುತ್ತಿದೆ. 

‘ಜಯೇಷ್‌ ಭಾಯ್‌ ಜೋರ್ದಾರ್‌’  ಚಿತ್ರವನ್ನು ಯಶ್‌ರಾಜ್‌ ಫಿಲ್ಮ್ಸ್‌ ನಿರ್ಮಾಣ ಮಾಡುತ್ತಿದೆ. ರಣವೀರ್ ಸಿಂಗ್‌ 9 ವರ್ಷಗಳ ಹಿಂದೆ ‘ಬ್ಯಾಂಡ್‌ ಬಾಜಾ ಭಾರಾತ್‌’ ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದರು. ಆ ಚಿತ್ರವನ್ನು ನಿರ್ಮಿಸಿದ್ದು ಸಹ ಇದೇ ಚಿತ್ರ ನಿರ್ಮಾಣ ಸಂಸ್ಥೆ.

ಈ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಅನ್ನು ಚಿತ್ರತಂಡ ಕೆಲದಿನಗಳ ಹಿಂದೆ ಬಿಡುಗಡೆ ಮಾಡಿದೆ. ಈ ಚಿತ್ರಕ್ಕಾಗಿ ರಣವೀರ್‌ ಸಿಂಗ್‌ ಭಾರಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಈ ಚಿತ್ರವನ್ನು ದಿವ್ಯಾಂಗ್‌ ಠಕ್ಕರ್‌ ನಿರ್ದೇಶಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)