ಮಂಗಳವಾರ, ಜನವರಿ 25, 2022
24 °C

ಬಾಲಿವುಡ್‌ಗೆ ಬಂದು 25 ವರ್ಷ, ಇನ್ನೂ ಕೆಲಸ ಹುಡುಕುತ್ತಿದ್ದೇನೆ: ಅರ್ಷದ್ ವಾರ್ಸಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಬಾಲಿವುಡ್‌ಗೆ ಬಂದು 25 ವರ್ಷವಾಯಿತು. ಆದರೆ ನನಗಿನ್ನೂ ಸೂಕ್ತ ಕೆಲಸ ಸಿಕ್ಕಿಲ್ಲ. ನನ್ನ ಜತೆಗಿದ್ದವರು ಹಲವರು ಕೆಲಸ ಕಳೆದುಕೊಂಡರು.. ಕೆಲವರು ಉದ್ಯಮದಿಂದ ದೂರ ಸರಿದರು ಎಂದು ನಟ ಅರ್ಷದ್ ವಾರ್ಸಿ ಹೇಳಿದ್ದಾರೆ.

ಬಾಲಿವುಡ್‌ನಲ್ಲಿ ಅವಕಾಶದ ಕೊರತೆ, ಸ್ವಜನಪಕ್ಷಪಾತ ಮತ್ತು ದೊಡ್ಡ ಬ್ಯಾನರ್‌ಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ಅರ್ಷದ್ ತನ್ನ ಮನದಾಳ ಹಂಚಿಕೊಂಡಿದ್ದಾರೆ.

ನನ್ನ ಒಟ್ಟಿಗೆ ಇದ್ದ ಹಲವರು ಸಿನಿಮಾ ಕ್ಷೇತ್ರ ಬಿಟ್ಟು ಹೋದರು. ಮತ್ತೆ ಒಂದಷ್ಟು ಮಂದಿಯ ಕೆಲಸ ಕಸಿಯಲಾಯಿತು ಎಂದು ಅರ್ಷದ್ ತಿಳಿಸಿದ್ದಾರೆ.

ಹಿಂದುಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮುಂದೆ ಏನಾಗಬಹುದು ಎಂದು ತಿಳಿದಿಲ್ಲ. ಅನಿಶ್ಚಿತತೆಯಲ್ಲಿ ಬದುಕು ಸಾಗಿದೆ. ಒಟ್ಟಿಗೆ ಇದ್ದವರು ಕೆಲಸ ಕಳೆದುಕೊಂಡಾಗಲೆಲ್ಲ, ಮುಂದಿನ ಸರದಿ ನನ್ನದು ಎಂಬ ಭಾವನೆ ಮೂಡುತ್ತಿದೆ. ಇಷ್ಟು ವರ್ಷವಾದರೂ, ನಾನಿನ್ನೂ ಕೆಲಸ ಹುಡುಕುತ್ತಲೇ ಇದ್ದೇನೆ ಎಂದು ಹೇಳಿದ್ದಾರೆ..

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು