7
ಮುಖ್ಯ ಭೂಮಿಕೆಯಲ್ಲಿ ರಾಧಿಕಾ ಚೇತನ್

ಕತ್ತಲೆಯಿಂದ ತೆರೆಯ ಕಡೆಗೆ ‘ಅಸತೋಮ ಸದ್ಗಮಯ’ 

Published:
Updated:

ಬೆಂಗಳೂರು: ರಾಧಿಕಾ ಚೇತನ್ ಮುಖ್ಯ ಭೂಮಿಕೆಯಲ್ಲಿರುವ ‘ಅಸತೋಮ ಸದ್ಗಮಯ’ ಚಿತ್ರವು ಜುಲೈ 6ರಂದು ಬಿಡುಗಡೆಯಾಗುತ್ತಿದೆ.

ಈಗಾಗಲೇ ಈ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾಗಿದೆ. ಪ್ರಸ್ತುತ ಜನರೇಶನ್ ಯಾವ ದಿಕ್ಕಿನಲ್ಲಿ ಬೆಳೆಯುತ್ತಿದೆ, ಹೆತ್ತವರು ತಮ್ಮ ಮಕ್ಕಳನ್ನು ಯಾವ ರೀತಿಯಲ್ಲಿ ಬೆಳೆಸುತ್ತಿದ್ದಾರೆ, ಇದರಿಂದ ಆಗುವ ಅನಾಹುತಗಳೇನು ಎಂಬ ವಿಷಯಗಳ ಸುತ್ತ ಈ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. 

‘ತಮ್ಮ ಮಕ್ಕಳು ಬುದ್ಧಿವಂತರಾಗಿರಬೇಕೆಂದು ಹೆತ್ತವರು ಬಯಸುತ್ತಾರೆ. ಮಕ್ಕಳು ಅತ್ಯುತ್ತಮ ಶಾಲೆಗಳಲ್ಲಿ ಓದಬೇಕು, ಶೇ 90ಕ್ಕಿಂತಲೂ ಹೆಚ್ಚು ಅಂಕ ತೆಗೆದುಕೊಳ್ಳಬೇಕು ಎಂಬ ರೀತಿಯಲ್ಲಿಯೇ ಬೆಳೆಸುತ್ತಾರೆ. ನಂತರ ಅವರು ತಮ್ಮ ಕರಿಯರ್‌ನಲ್ಲಿ ಬಹಳ ಎತ್ತರಕ್ಕೆ ಬೆಳೆದು ದೊಡ್ಡ ಸಾಧನೆ ಮಾಡಬೇಕು ಎಂದು ಬಯಸುತ್ತಾರೆ. ಆದರೆ ಸಂಬಂಧಗಳ ಬಗ್ಗೆ, ಮೌಲ್ಯಗಳ ಬಗ್ಗೆ ಜಾಸ್ತಿ ಒತ್ತು ಕೊಡುವುದಿಲ್ಲ. ಇದರಿಂದ ಆಗುವ ಅನಾಹುತಗಳೇನು ಎಂಬುದನ್ನು ಈ ಚಿತ್ರದಲ್ಲಿ ಮನಮುಟ್ಟುವಂತೆ ಹೇಳಲಾಗಿದೆ’ ಎನ್ನುತ್ತಾರೆ ನಿರ್ದೇಶಕರಾದ ರಾಜೇಶ್ ವೇಣೂರ್‌ ಅವರು.

ಅಶ್ವಿನ್ ಜೊಸ್ಸಿ ಪಿರೇರಾ ನಿರ್ಮಿಸಿರುವ ಈ ಚಿತ್ರದಲ್ಲಿ ರಾಧಿಕಾ ಚೇತನ್ ಜೊತೆಗೆ ಹೊಸ ಪ್ರತಿಭೆಗಳಾದ ಕಿರಣ್‌ರಾಜ್ ಹಾಗೂ ನಾಗರಾಜ್‍ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !