ಬುಧವಾರ, ಆಗಸ್ಟ್ 17, 2022
23 °C

ವರ್ಕೌಟ್ ವಿಡಿಯೊ ಹಂಚಿಕೊಂಡ ರಾಬರ್ಟ್ ಬೆಡಗಿ ಆಶಾ ಭಟ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ASHA Bhat Instagram

ಬೆಂಗಳೂರು: ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ನಟಿ ಆಶಾ ಭಟ್ ಇನ್‌ಸ್ಟಾಗ್ರಾಂನಲ್ಲಿ ಹೊಸ ವರ್ಕೌಟ್ ವಿಡಿಯೊ ಹಂಚಿಕೊಂಡಿದ್ದಾರೆ.

ಭದ್ರಾವತಿ ಮೂಲದವರಾದ ಆಶಾ ಭಟ್, ಬಾಲಿವುಡ್‌ನಲ್ಲಿ ಜಂಗ್ಲಿ ಚಿತ್ರದ ಮೂಲಕ ಸಿನಿಮಾ ಕ್ಷೇತ್ರ ಪ್ರವೇಶಿಸಿದರು. ನಂತರದಲ್ಲಿ ಈ ವರ್ಷ ತೆರೆಕಂಡ ರಾಬರ್ಟ್ ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

2014ರ ಮಿಸ್ ಸುಪ್ರಾನ್ಯಾಶನಲ್ ಪ್ರಶಸ್ತಿ ವಿಜೇತ ಅಶಾ ಭಟ್, ಫಿಟ್ನೆಸ್ ಮತ್ತು ವರ್ಕೌಟ್ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಾರೆ.

ಸಿನಿಮಾ ರಂಗ ಮಾತ್ರವಲ್ಲದೆ, ಆಶಾ ಭಟ್ ಮಾಡೆಲಿಂಗ್ ಲೋಕದಲ್ಲೂ ಹೆಸರು ಗಳಿಸಿದ್ದಾರೆ. ಕಾಲೇಜು ದಿನಗಳಲ್ಲಿ ಎನ್‌ಸಿಸಿಯಲ್ಲೂ ಆಶಾ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಇನ್‌ಸ್ಟಾಗ್ರಾಂನಲ್ಲಿ ಆಶಾ ಭಟ್, ಸದಾ ವಿವಿಧ ಫಿಟ್ನೆಸ್ ವರ್ಕೌಟ್ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡುತ್ತಾರೆ. ಈ ಬಾರಿ ಜಿಮ್‌ನಲ್ಲಿ ಹೊಸತೊಂದು ವರ್ಕೌಟ್ ಮಾಡುತ್ತಿರುವ ವಿಡಿಯೊ ಪೋಸ್ಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು