ಗುರುವಾರ , ನವೆಂಬರ್ 21, 2019
27 °C

‘ಗಲ್ಲಿಬಾಯ್‌’ ಹಿಂದಿ ಸಿನಿಮಾಗೆ ಏಷ್ಯನ್ ಅಕಾಡೆಮಿ ಪ್ರಶಸ್ತಿಯ ಗರಿ

Published:
Updated:
Prajavani

92ನೇ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ‘ಗಲ್ಲಿ ಬಾಯ್‌’ ಸಿನಿಮಾ ಈಗ ಏಷ್ಯನ್‌ ಅಕಾಡೆಮಿ ಕ್ರಿಯೇಟಿವ್ ವಿಭಾಗದಲ್ಲಿ ‘ಭಾರತದ ಅತ್ಯುತ್ತಮ ಸಿನಿಮಾ’ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ವಿಷಯವನ್ನು ನಟ ಫರ್ಹಾನ್ ಅಖ್ತರ್ ಟ್ವೀಟ್ ಮಾಡುವ ಮೂಲಕ ಸಿನಿಮಾ ತಂಡಕ್ಕೆ ಶುಭಾಶಯ ಕೋರಿದ್ದಾರೆ. ಸ್ಥಳೀಯ ಕತೆಯನ್ನು ಸಿನಿಮಾ ಒಳಗೊಂಡಿದೆ. ಇದೇ ವಿಭಾಗದಲ್ಲೇ ಸಿನಿಮಾ ಪ್ರಶಸ್ತಿ ಗೆದ್ದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಮುಂಬೈನ ಸ್ಟ್ರೀಟ್‌ ರ‍್ಯಾಪರ್‌ಗಳ ಕತೆಯನ್ನು ಸಿನಿಮಾ ಮಾಡಲಾಗಿತ್ತು. ನೂರಾರು ರ‍್ಯಾಪರ್‌ಗಳು ಈ ಸಿನಿಮಾ ಮೂಲಕ ಪ್ರಭಾವಿತರಾಗಿದ್ದರು. ರಣವೀರ್ ಸಿಂಗ್‌ ಹಾಗೂ ಸಿದ್ದಾರ್ಥ್‌ ಚತುರ್ವೇದಿ ರ‍್ಯಾಪರ್‌ಗಳಾಗಿ ಅಭಿನಯಿಸಿದ್ದಾರೆ. ಆಲಿಯಾ ಭಟ್‌ ಅಭಿನಯ ಕೂಡ ಮೆಚ್ಚುಗೆ ಪಡೆದುಕೊಂಡಿತ್ತು. ಕಲ್ಕಿ ಕೊಯ್ಲಿನ್‌, ವಿಜಯ್ ರಾಜ್‌ ಕೂಡ ಅಭಿನಯಿಸಿದ್ದರು.

ಇದನ್ನೂ ಓದಿ: ಜೋಯಾ ಹುಡುಕಿ ತೆಗೆದ ಕೊಳೆಗೇರಿ ಹುಡುಗ

ಪ್ರತಿಕ್ರಿಯಿಸಿ (+)