ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 6ಕ್ಕೆ ಶರಣ್‌ ನಟನೆಯ ‘ಅವತಾರ ಪುರುಷ’ ಬಿಡುಗಡೆ

Last Updated 17 ಮಾರ್ಚ್ 2022, 16:00 IST
ಅಕ್ಷರ ಗಾತ್ರ

ಚುಟು–ಚುಟು ಜೋಡಿ ನಟ ಶರಣ್‌ ಹಾಗೂ ನಟಿ ಆಶಿಕಾ ರಂಗನಾಥ್‌ ಅಭಿನಯದ, ‘ಸಿಂಪಲ್‌’ ಸುನಿ ನಿರ್ದೇಶನದ ‘ಅವತಾರ ಪುರುಷ’ ಸಿನಿಮಾ ಮೇ 6ರಂದು ಬಿಡುಗಡೆಯಾಗಲಿದೆ.

2021ರ ಡಿ.10ಕ್ಕೆ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಓಮೈಕ್ರಾನ್‌ ಭೀತಿ ಹಾಗೂ ಚಿತ್ರಮಂದಿರಗಳಿಗೆ ಪ್ರವೇಶಿಸಲು ಎರಡು ಡೋಸ್‌ ಲಸಿಕೆ ಕಡ್ಡಾಯ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದ ಕಾರಣ ಚಿತ್ರತಂಡವು ಬಿಡುಗಡೆ ದಿನಾಂಕವನ್ನು ಕೊನೆ ಕ್ಷಣದಲ್ಲಿ ಮುಂದೂಡಿತ್ತು. ಪ್ಯಾನ್‌ ಇಂಡಿಯಾ ಸಿನಿಮಾ ಕಾಲದಲ್ಲಿ ಈ ಸಿನಿಮಾ ಕನ್ನಡದಲ್ಲಷ್ಟೇ ತೆರೆ ಕಾಣಲಿದೆ ಎಂದು ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ವಾಮಾಚಾರ, ಮಾಟ ಮಂತ್ರದ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದ್ದು, ಶರಣ್‌ ಜೂನಿಯರ್‌ ಆರ್ಟಿಸ್ಟ್‌ ಪಾತ್ರದಲ್ಲಿ ಹತ್ತಕ್ಕೂ ಹೆಚ್ಚು ಗೆಟ್‌ಅಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುಷ್ಕರ ಮಲ್ಲಿಕಾರ್ಜುನಯ್ಯ ಅವರು ನಿರ್ಮಾಣ ಮಾಡಿರುವ ಈ ಚಿತ್ರವು ಎರಡು ಭಾಗಗಳಲ್ಲಿ ತೆರೆಕಾಣುತ್ತಿದ್ದು, ಮೊದಲನೇ ಭಾಗ ರಿಲೀಸ್‌ ಆದ 101ನೇ ದಿನಕ್ಕೆ ಎರಡನೇ ಭಾಗವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಆಶಿಕಾ ರಂಗನಾಥ್‌
ಆಶಿಕಾ ರಂಗನಾಥ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT