ಭಾನುವಾರ, ಏಪ್ರಿಲ್ 5, 2020
19 °C

ಬಿಕಿನಿ ಲುಕ್‌ನಲ್ಲಿ ಶ್ರದ್ಧಾ ಕಪೂರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿರ್ದೇಶಕ ಅಹಮ್ಮದ್‌ ಖಾನ್‌ ಮತ್ತು ನಟ ಟೈಗರ್‌ ಶ್ರಾಫ್ ಕಾಂಬಿನೇಷನ್‌ನಡಿ ತೆರೆ ಕಂಡಿರುವ ಹಿಂದಿಯ ‘ಬಾಗಿ 3’ ಚಿತ್ರ ‘ಕೋವಿಡ್‌ 19’ ಭೀತಿಯ ನಡುವೆಯೂ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಲೆಕ್ಷನ್‌ ಕಂಡಿದೆ. ‘ಸಾಹೋ’ ಬೆಡಗಿ ಶ್ರದ್ಧಾ ಕಪೂರ್‌ ಅವರು ನಟ ಟೈಗರ್‌ ಶ್ರಾಫ್‌ ಜೊತೆಗೆ ಭರ್ಜರಿಯಾಗಿಯೇ ಹೆಜ್ಜೆ ಹಾಕಿದ್ದಾರೆ. ಹಾಡೊಂದರಲ್ಲಿ ಶ್ರದ್ಧಾ ಬಿಕಿನಿ ತೊಟ್ಟು ಕುಣಿದಿರುವುದು ಪಡ್ಡೆಹುಡುಗರ ನಿದ್ದೆಗೆಡಿಸಿದೆ.

‘ಸಾಹೋ’ ಚಿತ್ರದಲ್ಲಿನ ಪ್ರಭಾಸ್‌ ಜೊತೆಗಿನ ಶ್ರದ್ಧಾ ನಟನೆ ಪ್ರೇಕ್ಷಕರ ಮನ ಸೆಳೆದಿತ್ತು. ಬಳಿಕ ಆ್ಯಕ್ಷನ್‌ ಚಿತ್ರ ‘ಬಾಗಿ 3’ಯಲ್ಲಿಯೂ ಆಕೆಯ ನಟನೆ ಕುರಿತು ಒಳ್ಳೆಯ ಮಾತುಗಳೂ ಕೇಳಿಬರುತ್ತಿವೆ. ಮತ್ತೊಂದೆಡೆ ವೃತ್ತಿಬದುಕು ಸೇರಿದಂತೆ ಮಹತ್ವದ ವಿಷಯಗಳನ್ನು ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತವಾಗಿ ಹಂಚಿಕೊಳ್ಳುವುದರಲ್ಲಿ ಹಿಂಜರಿಕೆಪಡುವುದಿಲ್ಲ. ಈ ನಡುವೆಯೇ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ‘ಬಾಗಿ 3’ ಚಿತ್ರದಲ್ಲಿನ ಬಿಕಿನಿ ಫೋಟೊವೊಂದರನ್ನು ಹಂಚಿಕೊಂಡಿರುವುದು ಈಗ ಸುದ್ದಿಯಾಗಿದೆ.

ನಟಿ ದಿಶಾ ಪಟಾನಿ ಕೂಡ ಈ ಸಿನಿಮಾದಲ್ಲಿ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ದಿಶಾ ಮತ್ತು ಶ್ರದ್ಧಾ ಇಬ್ಬರೂ ಬಿಕಿನಿ ತೊಟ್ಟು ಹಾಡುಗಳಿಗೆ ಸೊಂಟ ಬಳುಕಿಸಿದ್ದಾರೆ. ಅದ್ಭುತ ಸಾಹಸ ದೃಶ್ಯಗಳು, ಶ್ರದ್ಧಾಳ ಬಿಕಿನಿ ಲುಕ್‌, ದಿಶಾ ಪಟಾನಿಯ ಕುಣಿತ... ಎಲ್ಲವೂ ಮೊದಲ ವಾರದ ಮೂರು ದಿನಗಳಲ್ಲಿ ಈ ಚಿತ್ರ ₹ 53 ಕೋಟಿ ಲಾಭ ಗಳಿಸಲು ಕಾರಣವಾಗಿದೆ ಎಂಬುದು ಬಾಲಿವುಡ್‌ ಅಂಗಳದಿಂದ ಕೇಳಿಬರುತ್ತಿರುವ ಮಾತು.

 
 
 
 

 
 
 
 
 
 
 
 
 

Siya ❤️

A post shared by Shraddha (@shraddhakapoor) on

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು