ಹೈದರಾಬಾದ್: ಕೊರೊನಾ ವೈರಸ್ ಸೋಂಕಿನಿಂದ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದ ಚಲನಚಿತ್ರ ನಿರ್ದೇಶಕ ಎಸ್.ಎಸ್.ರಾಜಮೌಳಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಕೋವಿಡ್–19 ನೆಗೆಟಿವ್ ಬಂದಿದೆ.

ಬಾಹುಬಲಿ ಸಿನಿಮಾ ಸರಣಿ ಖ್ಯಾತಿಯ ರಾಜಮೌಳಿ(46) ಜ್ವರದ ಲಕ್ಷಣಗಳು ಕಂಡು ಬಂದಿದ್ದರಿಂದ ಜುಲೈ 29ರಂದು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಸೋಂಕು ದೃಢಪಡುತ್ತಿದ್ಧಂತೆ ಮನೆಯ ಸದಸ್ಯರಿಗೂ ಪರೀಕ್ಷೆ ನಡೆಸಲಾಗಿತ್ತು ಹಾಗೂ ಎಲ್ಲರೂ ಕ್ವಾರಂಟೈನ್ ಆಗಿದ್ದರು.

ಪ್ಲಾಸ್ಮಾ ದಾನ ಮಾಡಲು ವೈದ್ಯರ ಸಲಹೆ ಮೇರೆಗೆ ನನ್ನ ಕುಟುಂಬದವರು ಮೂರು ವಾರಗಳು ಕಾಯಬೇಕಿದೆ ಎಂದು ಟ್ವಿಟರ್ನಲ್ಲಿ ಪ್ರಕಟಿಸಿಕೊಂಡಿದ್ದಾರೆ.

'ಎರಡು ವಾರಗಳ ಕ್ವಾರಂಟೈನ್ ಪೂರ್ಣಗೊಳಿಸಿದೆ. ಸೋಂಕು ಲಕ್ಷಣಗಳು ಇಲ್ಲ. ಮತ್ತೆ ಪರೀಕ್ಷೆಗೆ ಒಳಗಾಗಿದ್ದು, ನೆಗೆಟಿವ್ ಬಂದಿದೆ. ಪಾಸ್ಮಾ ದಾನ ಮಾಡಲು ಅಗತ್ಯವಿರುವಷ್ಟು ಪ್ರತಿಕಾಯಗಳು ಬೆಳವಣಿಯಾಗಲು ಮೂರು ವಾರಗಳು ಕಾಯಬೇಕಿದೆ' ಎಂದಿದ್ದಾರೆ.

ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಣೆಗೂ ಮುನ್ನ ರಾಜಮೌಳಿ 'ರೈಸ್ ರೋರ್ ರೆವೋಲ್ಟ್' ಸಿನಿಮಾದ ಸಿದ್ಧತೆಯಲ್ಲಿದ್ದರು. ರಾಮ್ ಚರಣ್, ಎನ್ಟಿಆರ್ ಜೂನಿಯರ್ ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.