ರಾಜಮೌಳಿ ನಿರ್ದೇಶನದಲ್ಲಿ ಪ್ರಭಾಸ್ ನಟಿಸಿದ್ದ ‘ಬಾಹುಬಲಿ: ದಿ ಬಿಗಿನಿಂಗ್’ ಚಿತ್ರ ಭಾರತೀಯ ಚಿತ್ರರಂಗದಲ್ಲಿಯೇ ಇತಿಹಾಸ ಸೃಷ್ಟಿಸಿತ್ತು. ಭಾರತೀಯ ಚಿತ್ರೋದ್ಯಮದ ದೃಶ್ಯ ವೈಭವಕ್ಕೆ ಮರು ವ್ಯಾಖ್ಯಾನ ನೀಡಿದ ಚಿತ್ರವಿದು. ವಿಎಫ್ಎಕ್ಸ್, ಗ್ರಾಫಿಕ್ಸ್ ಲೋಕದ ಸಾಮರ್ಥ್ಯವನ್ನು ತೆರೆದಿಟ್ಟಿತ್ತು. ಇದರ ಭರ್ಜರಿ ಯಶಸ್ಸಿನ ಬಳಿಕ ‘ಬಾಹುಬಲಿ: ದಿ ಕನ್ಕ್ಲೂಷನ್’ ಕೂಡ ತೆರೆ ಕಂಡಿತ್ತು.

‘ಬಾಹುಬಲಿ’ ಬಿಡುಗಡೆಗೊಂಡು ಹತ್ತು ವರ್ಷಗಳು ಕಳೆದಿವೆ. ಇದೇ ಖುಷಿಯಲ್ಲಿ ಎರಡೂ ಭಾಗಗಳನ್ನೂ ಸೇರಿಸಿ ‘ಬಾಹುಬಲಿ: ದಿ ಎಪಿಕ್’ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಅಣಿಯಾಗಿದೆ. ಈ ವರ್ಷ ಅ.31ರಂದು ಚಿತ್ರ ತೆರೆಗೆ ಬರಲಿದೆ. ಆಗಸ್ಟ್ 14ರಂದು ತೆರೆ ಕಾಣುತ್ತಿರುವ ಬಹುನಿರೀಕ್ಷಿತ ‘ಕೂಲಿ’ ಮತ್ತು ‘ವಾರ್ 2’ ಸಿನಿಮಾಗಳ ಜತೆಗೆ ‘ಬಾಹುಬಲಿ: ದಿ ಎಪಿಕ್’ ಟೀಸರ್ ಪ್ರದರ್ಶನಗೊಳ್ಳಲಿದೆ.

ಎರಡೂ ಸಿನಿಮಾಗಳನ್ನು ಯಥಾವತ್ತು ಜೋಡಿಸಿ ಬಿಡುಗಡೆ ಮಾಡುತ್ತಿಲ್ಲ. ಹಾಗೆ ಮಾಡಿದರೆ ಚಿತ್ರದ ಅವಧಿ 5 ಗಂಟೆ 27 ನಿಮಿಷಗಳಾಗಲಿವೆ. ಬದಲಿಗೆ ಎರಡೂ ಭಾಗಗಳಲ್ಲಿಯೂ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಿ ಒಟ್ಟಾರೆ ಚಿತ್ರದ ಅವಧಿಯನ್ನು 3 ಗಂಟೆ 45 ನಿಮಿಷಗಳಿಗೆ ಇಳಿಸಲಾಗಿದೆ. ಹೊಸ ಅನುಭವಕ್ಕಾಗಿ ಕೆಲವು ಹೊಸ ದೃಶ್ಯಗಳನ್ನು ಸೇರಿಸಿರುವುದಾಗಿ ಚಿತ್ರತಂಡ ಹೇಳಿದೆ.

‘ಬಾಹುಬಲಿ’ ಸಿನಿಮಾದಲ್ಲಿ ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ರಮ್ಯಾ ಕೃಷ್ಣನ್, ತಮನ್ನಾ ಭಾಟಿಯಾ, ಸತ್ಯರಾಜ್ ಮುಂತಾದವರು ನಟಿಸಿದ್ದಾರೆ. ಎಂಎಂ ಕೀರವಾಣಿ ಸಂಗೀತವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.