ಶುಕ್ರವಾರ, ಮೇ 27, 2022
22 °C

 ’ಬಚ್‌ಪನ್‌ ಕಾ ಪ್ಯಾರ್‌’ ಹಾಡಿನ ಖ್ಯಾತಿಯ ಸಹದೇವ್‌ಗೆ ಅಪಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ’ಬಚ್‌ಪನ್‌ ಕಾ ಪ್ಯಾರ್‌’ ಹಾಡಿನ ಖ್ಯಾತಿಯ ಉತ್ತರಾಖಂಡ ರಾಜ್ಯದ ಬಾಲಕ ಸಹದೇವ್ ಡಿರ್ಡೊ ಬೈಕ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಚತ್ತೀಸ್‌ಗಡ ಜಿಲ್ಲೆಯ ಸುಕ್ಮಾ ನಗರದ ಸಮೀಪದಲ್ಲಿ ಮಂಗಳವಾರ ಸಂಜೆ ಸಹದೇವ್‌ ಮತ್ತು ಅವರ ತಂದೆ ಬೈಕ್‌ನಲ್ಲಿ ಹೋಗುವಾಗ ಅಪಘಾತ ಸಂಭವಿಸಿದೆ. ಸಹದೇವ್‌ ಕೆಳಗೆ ಬಿದ್ದಿದ್ದು ಅವರ ತಲೆಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಹದೇವ್‌ ತಂದೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೆಲ್ಮೆಟ್‌ ಧರಿಸಿಲ್ಲವಾದ್ದರಿಂದ ಸಹದೇವ್‌ ಗಾಯಗೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

10 ವರ್ಷದ ಸಹದೇವ್‌ ಶಾಲೆಯಲ್ಲಿ’ಬಚ್‌ಪನ್‌ ಕಾ ಪ್ಯಾರ್‌’ ಹಾಡನ್ನು ಹಾಡಿದ್ದರು. ಇದು ಇಂಟರ್‌ನೆಟ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಚತ್ತೀಸ್‌ಗಡ ಮುಖ್ಯಮಂತ್ರಿ ಅವರು ಕೂಡ ಈ ಬಾಲಕನಿಗೆ ಸನ್ಮಾನ ಮಾಡಿದ್ದರು. 

ಈ ಹಾಡಿನಿಂದ ಖ್ಯಾತಿ ಪಡೆದಿದ್ದ ಸಹದೇವ್‌ಗೆ ಬಾಲಿವುಡ್‌ ಸಂಗೀತ ನಿರ್ದೇಶಕ ಬಾದ್‌ಶಾಹ  ಸಿನಿಮಾವೊಂದರಲ್ಲಿ ಹಾಡಲು ಅವಕಾಶ ನೀಡಿದ್ದರು. ಸಹದೇವ್‌ ಅಪಘಾತದ ಬಗ್ಗೆ ಅವರು ಟ್ವೀಟ್‌ ಮಾಡಿದ್ದು ಸಹದೇವ್‌ ಜೊತೆ ನಾನು ಇದ್ದೇನೆ ಎಂದಿದ್ದಾರೆ. 

ಓದಿ: 

 ’ಬಚ್‌ಪನ್‌ ಕಾ ಪ್ಯಾರ್‌’  ಹಾಡು ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಜನಪ್ರಿಯತೆ ಪಡೆದಿತ್ತು. 

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು