ಗುರುವಾರ , ಸೆಪ್ಟೆಂಬರ್ 23, 2021
28 °C

ಭಾರತಕ್ಕೆ ‘ಬ್ಯಾಡ್‌ ಬಾಯ್ಸ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕೊಲಂಬಿಯಾ ಪಿಕ್ಚರ್ಸ್‌ ನಿರ್ಮಾಣದ ‘ಬ್ಯಾಡ್‌ ಬಾಯ್ಸ್‌ ಫಾರ್‌ ಲೈಫ್‌’ ಜ.31ರಂದು ಭಾರತದಲ್ಲಿ ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಬಿಡುಗಡೆಯಾಗಲಿದೆ. 

ಕಾಮೆಡಿ ಹಾಗೂ ಆ್ಯಕ್ಷನ್ ಮಿಶ್ರಿತ ಸಿನಿಮಾದಲ್ಲಿ ವಿಲ್ ಸ್ಮಿತ್ ಹಾಗೂ ಮಾರ್ಟಿನ್ ಲಾರೆನ್ಸ್ ಪೊಲೀಸ್‌ ಅಧಿಕಾರಿಗಳಾಗಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಬಂದ ಬ್ಯಾಡ್‌ ಬಾಯ್ಸ್‌ (1995), ಬ್ಯಾಡ್‌ ಬಾಯ್ಸ್‌–2 (2003) ಮುಂದುವರಿದ ಭಾಗವೇ ‘ಬ್ಯಾಡ್‌ ಬಾಯ್ಸ್‌ ಫಾರ್‌ ಲೈಫ್‌’. 

ಆದಿಲ್ ಎಲ್ ಅರ್ಬಿ ಮತ್ತು ಬಿಲಾಲ್ ಫಲ್ಲಾ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಜೆರ್ರಿ ಬ್ರೂಕ್‌ಹೈಮರ್, ವಿಲ್ ಸ್ಮಿತ್ ಮತ್ತು ಡೌಗ್ ಬೆಲ್‌ಗ್ರಾಡ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. 

ಅಮೆರಿಕದಲ್ಲಿ ಜ.17ರಂದು ಬಿಡುಗಡೆಯಾದ ‘ಬ್ಯಾಡ್‌ ಬಾಯ್ಸ್‌ ಫಾರ್‌ ಲೈಫ್‌’ ಎರಡು ವಾರಗಳಲ್ಲಿ ಚಿತ್ರ ಸಾವಿರಾರು ಕೋಟಿ ಗಳಿಸಿದೆ. ಹೊಸ ವರ್ಷದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಾಲಿವುಡ್‌ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಸುಮಾರು 17 ವರ್ಷಗಳ ನಂತರ ಮತ್ತೆ ತೆರೆಗೆ ಬಂದ ‘ಬ್ಯಾಡ್‌ ಬಾಯ್ಸ್‌’ ಸರಣಿ ಚಿತ್ರಗಳ ಬಗ್ಗೆ ಪ್ರೇಕ್ಷಕರಲ್ಲಿ ಇನ್ನೂ ಕ್ರೇಜ್‌ ಕಡಿಮೆಯಾಗಿಲ್ಲ ಎಂಬುದನ್ನು ಈ ಚಿತ್ರ ಸಾಬೀತುಪಡಿಸಿದೆ. 

ಅವತಾರ್, ಅಮೆರಿಕನ್ ಸ್ಪಿನ್ನರ್, ಕುಂಗ್‌ಫೂ ಪಾಂಡ–3 ಸಿನಿಮಾ ಕೂಡ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಾವಿರಾರು ಕೋಟಿ ವಹಿವಾಟು ನಡೆಸಿದ ಇತಿಹಾಸವಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು