ಮೈಸೂರು: ಮೈಸೂರಿನ ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂನಲ್ಲಿ (ಮೇಣದ ಪ್ರತಿಮೆಗಳ ಜಾಗ) ಪ್ರದರ್ಶನಕ್ಕೆ ಇಡಲಾಗಿದ್ದ ಬಾಹುಬಲಿ ಮೇಣದ (ನಟ ಪ್ರಭಾಸ್ ಅವರನ್ನು ಹೋಲುವ) ಪ್ರತಿಮೆಯನ್ನು ಸೋಮವಾರ ತೆರವುಗೊಳಿಸಲಾಗಿದೆ.
ಇದಕ್ಕೆ ಕಾರಣ ಎಸ್.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ನಿರ್ಮಾಪಕ ಶೋಬು ಯರ್ಲಗಡ್ಡ (Shobu Yarlagadda) ಅವರ ಆಕ್ಷೇಪ.
ಈಚೆಗೆ ಈ ಮ್ಯೂಸಿಯಂಗೆ ಭೇಟಿ ನೀಡಿದ್ದ ಪ್ರವಾಸಿಗರೊಬ್ಬರು ಪ್ರತಿಮೆಯ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದು ಬಹಳಷ್ಟು ಹರಿದಾಡಿತ್ತು. Prabhas Network ಎಂಬ X ಪೇಜ್ ಒಂದು ಈ ಚಿತ್ರವನ್ನು ಹಂಚಿಕೊಂಡಿತ್ತು.