ಶನಿವಾರ, ಮೇ 21, 2022
20 °C

ಸೆಟ್ಟೇರಿತು ‘ಬಂಬೂಸವಾರಿ’: ಎನ್.ಮಹೇಶ್ ನಿರ್ದೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕೋಲಾರ’, ‘ಇಂಗ್ಲಿಷ್ ಮಂಜ’ ಸಿನಿಮಾದ ಸಾರಥಿ ಆರ್ಯ ಎನ್.ಮಹೇಶ್ ನಿರ್ದೇಶನದಲ್ಲಿ ಸೆಟ್ಟೇರಿರುವ ಬಂಬೂ ಸವಾರಿ ಸಿನಿಮಾದ ಮುಹೂರ್ತ ಭಾನುವಾರ ಬೆಂಗಳೂರಿನ ಗುಂಡಾಂಜನೇಯ ದೇಗುಲದಲ್ಲಿ ನೆರವೇರಿತು. ನಿರ್ದೇಶಕ ಸಿಂಪಲ್ ಸುನಿ, ನಟ ಶ್ರೀನಗರ ಕಿಟ್ಟಿ, ವಿನೋದ್ ಪ್ರಭಾಕರ್ ಹಾಗೂ ನಿರ್ದೇಶಕ ಕೆ.ಎಂ.ಚೈತನ್ಯ ಭಾಗವಹಿಸಿದ್ದರು.

ಸಿಂಪಲ್ ಸುನಿ ಮಾತನಾಡಿ, ‘ಈ ಚಿತ್ಸದ ಹೆಸರಲ್ಲಿಯೇ ಸಕಾರಾತ್ಮಕ ಶಕ್ತಿ ಇದೆ. ‘ಸವಾರಿ’ ಅನ್ನುವ ಸಿನಿಮಾ ಮೈಲುಗಲ್ಲು ಸಾಧಿಸಿತ್ತು. ಮಹೇಶ್ ಪ್ರಚಲಿತ ವಿದ್ಯಮಾನಗಳ ಮೇಲೆ ಸಿನಿಮಾ ಕಥೆ ಹೇಳುತ್ತಾರೆ. ವರ್ಧನ್ ಒಳ್ಳೆ ಕಲಾವಿದ’ ಎಂದರು.

ಶ್ರೀನಗರ ಕಿಟ್ಟಿ, ಮಹೇಶ್ ಮುಂದಿನ ಪ್ರಯತ್ನ. ನಾನು ಜಂಬೂ ಸವಾರಿ ಅಂದುಕೊಂಡಿದ್ದೆ. ಟೈಟಲ್ ಹೇಳಿದ ಮೇಲೆ ‘ಬಂಬೂ ಸವಾರಿ’ ಎಂದು ಗೊತ್ತಾಯಿತು’ ಎಂದರು.

‘ಬಂಬೂ ಸವಾರಿ’ ಸಿನಿಮಾದಲ್ಲಿ ತಾಂಡವ ರಾಮ, ವರ್ಧನ್, ದೀಪಕ್ ವಿ. ಮುಖ್ಯಭೂಮಿಕೆಯಲ್ಲಿದ್ದಾರೆ. ಆದ್ಯ ಪ್ರಿಯಾ, ಅಭಿ ಸಾರಿಕಾ ನಾಯಕಿಯರು. ವಿ.ನಾಗೇಂದ್ರ ಪ್ರಸಾದ್, ನಾಗೇಂದ್ರ ಅರಸ್, ಬಾಲರಾಜ್ ವಾಡಿ, ಷರೀಫ್ ತಾರಾಗಣದಲ್ಲಿದ್ದಾರೆ.

ಬಿ.ಆರ್.ಹೇಮಂತ್ ಕುಮಾರ್ ಸಂಗೀತ, ಮಂಜು ಛಾಯಾಗ್ರಹಣ, ಗಿರೀಶ್ ಕುಮಾರ್ ಕೆ. ಸಂಕಲನ,
ಕವಿರತ್ನ ಡಾ.ವಿ. ನಾಗೇಂದ್ರ ಪ್ರಸಾದ್ ,ಸಿಂಪಲ್ ಸುನಿ, ವಿಜಯ್ ಟಿ.ಪಿ. ಸಾಹಿತ್ಯವಿದೆ. ವೇದಾನಂದ್ ಸಹಾಯಕ ನಿರ್ದೇಶಕರು. ಚಿತ್ರಕ್ಕೆ ಇನ್ಫ್ಯಾಂಟ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿ ಡೇವಿಡ್ ಆರ್ ಬಂಡವಾಳ ಹೂಡಿದ್ದಾರೆ.

‘ಬಂಬೂ ಸವಾರಿ’ ಕಲ್ಟ್ ಜಾನರ್ ಸಿನಿಮಾವಾಗಿದ್ದು, ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು