ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೇಷರಮ್‌ ರಂಗ್‌’ವಿವಾದ: ಚಿತ್ರ ಮಂದಿರ ಸುಡಲು ಅಯೋಧ್ಯೆ ಸ್ವಾಮೀಜಿ ಕರೆ

Last Updated 15 ಡಿಸೆಂಬರ್ 2022, 14:18 IST
ಅಕ್ಷರ ಗಾತ್ರ

ಶಾರುಖ್ ಖಾನ್–ದೀಪಿಕಾ ಪಡುಕೋಣೆ ನಟಿಸಿರುವ ‘ಪಠಾಣ್‌’ ಚಿತ್ರವೀಗ ವಿವಾದದ ಗೂಡಾಗಿದೆ. ಸಿನಿಮಾದ ‘ಬೇಷರಮ್‌ ರಂಗ್‌’ ಹಾಡಿನಲ್ಲಿ ಕೇಸರಿ ಬಟ್ಟೆ ಬಳಸಿ ದೀಪಿಕಾ ಪಡುಕೋಣೆ ಅವರನ್ನು ಬಿಕಿನಿಯಲ್ಲಿ ತೋರಿಸಿ, ಕೇಸರಿ ಬಣ್ಣದ ಹಿಂದಿರುವ ಭಾವನೆಗೆ ಧಕ್ಕೆ ತರಲಾಗಿದೆ. ಈ ಹಾಡನ್ನು ರದ್ದು ಮಾಡಬೇಕು ಎಂದು ಸುಪ್ರೀಂಕೋರ್ಟ್‌ ನ್ಯಾಯವಾದಿ ವಿನೀತ್‌ ಜಿಂದಾಲ್‌ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ದೂರು ನೀಡಿದ್ದಾರೆ.

ಇನ್ನೊಂದೆಡೆ ಅಯೋಧ್ಯೆಯ ರಾಜು ದಾಸ್‌ ಸ್ವಾಮೀಜಿ ವಿಡಿಯೊ ಸಂದೇಶದೊಂದಿಗೆ ಹಾಡಿನ ಕುರಿತು ಆಕ್ರೋಶ ಹೊರಹಾಕಿದ್ದಾರೆ. ಕೇಸರಿಗೆ, ಧರ್ಮದ ಭಾವನೆಗೆ ಧಕ್ಕೆ ತರುವ ಪಠಾಣ್‌ ಸಿನಿಮಾ ಬಿಡುಗಡೆಯಾಗುವ ಚಿತ್ರಮಂದಿರಗಳನ್ನು ಸುಡಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

‘ಬಾಲಿವುಡ್ ಮತ್ತು ಹಾಲಿವುಡ್ ಯಾವಾಗಲೂ ಸನಾತನ ಧರ್ಮವನ್ನು ಗೇಲಿ ಮಾಡಲು ಪ್ರಯತ್ನಿಸುತ್ತವೆ. ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿನಿ ಧರಿಸಿ ನೃತ್ಯ ಮಾಡಿರುವ ರೀತಿ ನೋವುಂಟುಮಾಡಿದೆ. ಬಿಕಿನಿಗೆ ಕೇಸರಿಯನ್ನೇ ಬಳಸುವ ಅವಶ್ಯಕತೆ ಏನಿತ್ತು? ಚಿತ್ರ ಪ್ರದರ್ಶನಗೊಳ್ಳುವ ಚಿತ್ರ ಮಂದಿರಗಳನ್ನು ಸುಟ್ಟು ಹಾಕಿ, ಇಲ್ಲದಿದ್ದರೆ ಅವರಿಗೆ ನಮ್ಮ ಬೆಲೆ ಅರ್ಥವಾಗುವುದಿಲ್ಲ, ಕೆಟ್ಟದ್ದನ್ನು ಮಟ್ಟ ಹಾಕಲು ದುಷ್ಟರಾಗಲೇಬೇಕು’ಎಂದು ಸ್ವಾಮೀಜಿ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಸಚಿವಾಲಯಕ್ಕೆ ಪತ್ರ:
ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿರುವ ವಕೀಲ ವಿನೀತ್‌, ಹಾಡು ಅಶ್ಲೀಲವಾಗಿದ್ದು, ಹಾಡಿನಲ್ಲಿ ದೀಪಿಕಾ ಧರಿಸಿರುವ ಕೇಸರಿ ಬಣ್ಣದ ಬಿಕಿನಿ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದೆ. ಕೇಸರಿಯನ್ನು ನಾಚಿಕೆ ಇಲ್ಲದ ಬಣ್ಣ ಎಂದು ಕರೆಯಲಾಗಿದೆ. ಹೀಗಾಗಿ ಇದು ಕೇಸರಿಯವರಿಗೆ ನೋವು ಉಂಟು ಮಾಡುತ್ತದೆ ಎಂದಿದ್ದಾರೆ.

ತಮ್ಮ ದೂರಿನ ಬಗ್ಗೆ ಟ್ವೀಟ್‌ ಮಾಡಿರುವ ವಿನೀತ್‌, ಕೇಸರಿಯು ತ್ಯಾಗ, ಜ್ಞಾನ, ಪರಿಶುದ್ಧತೆ ಮತ್ತು ಸೇವೆಯ ಸಂಕೇತವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಈ ಹಾಡಿನಲ್ಲಿ ಅಶ್ಲೀಲ ಸನ್ನಿವೇಶಗಳ ಮೂಲಕ ಹೆಮ್ಮೆ ಮತ್ತು ಭಕ್ತಿಯ ಬಣ್ಣವನ್ನು ಅವಮಾನಿಸಲಾಗಿದೆ. ಹಾಡನ್ನು ರದ್ದುಗೊಳಿಸಿ ಶಾರೂಖ್‌ ಮತ್ತು ದೀಪಿಕಾ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿರುವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT