ಸೋಮವಾರ, ಡಿಸೆಂಬರ್ 5, 2022
22 °C

‘ಬನಾರಸ್‌’ ವಿತರಿಸಲಿದೆ ಮಲಕುಪ್ಪಡಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಝೈದ್ ಖಾನ್ ನಾಯಕನಾಗಿ ನಟಿಸಿರುವ ‘ಬನಾರಸ್’ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರವನ್ನು ಕೇರಳದ ಖ್ಯಾತ ವಿತರಣಾ ಸಂಸ್ಥೆ ಮಲಕುಪ್ಪಡಮ್ ವಿತರಿಸಲಿದೆ. ಈ ಸಂಸ್ಥೆ ಹಲವಾರು ಹಿಟ್ ಸಿನಿಮಾಗಳನ್ನು ಕೇರಳದಲ್ಲಿ ಬಿಡುಗಡೆಗೊಳಿಸಿದೆ.

ದೇಶಾದ್ಯಂತ ಉದ್ಯಮಿಯಾಗಿ ದೊಡ್ಡ ಹೆಸರು ಮಾಡಿರುವ ಥಾಮಸ್ ಆಂಟೋನಿ, ತೋಮಿಚನ್ ಮುಪಕುಪ್ಪದಮ್ ಎಂದೇ ಹೆಸರುವಾಸಿಯಾಗಿರುವವರು. ಅವರು ಉದ್ಯಮಿಯಾಗಿದ್ದುಕೊಂಡೇ ಮಲಕುಪ್ಪಡಮ್ ಫಿಲಂಸ್ ಮೂಲಕ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಸಂಸ್ಥೆಯ ಪರಿಣತರು ಚಿತ್ರದ ಮೇಕಿಂಗ್‌, ಕಥಾವಸ್ತು ಸಹಿತ ಗುಣಮಟ್ಟ ಪರಿಶೀಲನೆ ನಡೆಸಿ ಖರೀದಿಗೆ ಸಮ್ಮತಿಸಿದ್ದಾರೆ. ದೊಡ್ಡ ಮೊತ್ತಕ್ಕೆ ‘ಬನಾರಸ್’ ವಿತರಣಾ ಹಕ್ಕುಗಳ ಖರೀದಿ ನಡೆದಿದೆ. ಹೀಗಾಗಿ ಚಿತ್ರ ಕರ್ನಾಟಕ, ಕೇರಳದಲ್ಲಿ ಹೊಸ ಭರವಸೆ ಹುಟ್ಟು ಹಾಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು