ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂಗಾರಾಜು’ವಿಗಾಗಿ ನಾಗಲಕ್ಷ್ಮೀಯಾಗಿ ಬಂದ ನಟಿ ಕೃತಿ ಶೆಟ್ಟಿ: ಪೋಸ್ಟರ್ ಅನಾವರಣ

Last Updated 18 ನವೆಂಬರ್ 2021, 9:47 IST
ಅಕ್ಷರ ಗಾತ್ರ

ಬೆಂಗಳೂರು: 'ಉಪ್ಪೆನಾ'ತೆಲುಗು ಸಿನಿಮಾ ಮೂಲಕ ಟಾಲಿವುಡ್‌ನಲ್ಲಿ ಗಮನ ಸೆಳೆದ ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿಗೆ ಇದೀಗ ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿವೆ.

ನಾಗ ಚೈತನ್ಯ ಹಾಗೂ ನಾಗಾರ್ಜುನ್ ಅವರ ಕಾಂಭಿನೇಷನ್‌ನಲ್ಲಿ ತಯಾರಾಗುತ್ತಿರುವ ‘ಬಂಗಾರಾಜು’ ಸಿನಿಮಾದಲ್ಲಿ ಕೃತಿ ಶೆಟ್ಟಿ ನಾಯಕಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಿನಿಮಾದ ಮೊದಲ ಪೋಸ್ಟರ್ ಅನಾವರಣಗೊಂಡಿದ್ದು ಅದರಲ್ಲಿ ಕೃತಿ ಶೆಟ್ಟಿ ಪಾತ್ರವನ್ನು ರಿವೀಲ್ ಮಾಡಲಾಗಿದೆ.

ನಾಗಾರ್ಜುನ್, ನಾಗಚೈತನ್ಯ ಪೋಸ್ಟರ್‌ನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.ಬಂಗಾರಾಜು ಸಿನಿಮಾಕ್ಕಾಗಿ ನಾಗಲಕ್ಷ್ಮೀಯಾಗಿ ಕೃತಿ ಶೆಟ್ಟಿ ಕಾಣಿಸಿಕೊಂಡಿದ್ದು, ಸಾಕಷ್ಟು ಗಮನ ಸೆಳೆದಿದ್ದಾರೆ. ಕೃತಿಗೆ ಈ ಸಿನಿಮಾ ಟಾಲಿವುಡ್‌ನಲ್ಲಿ ದೊಡ್ಡ ಬ್ರೇಕ್ ನೀಡಲಿದೆ ಎನ್ನಲಾಗುತ್ತಿದೆ.

ಬಂಗಾರಾಜು ಸಿನಿಮಾ ನಾಗಾರ್ಜುನ್ ಹಾಗೂ ರಮ್ಯ ಕೃಷ್ಣ ಅವರ ‘ಸೊಗ್ಗಡೆ ಚಿನ್ನಿ ನಯನಾ’ ಸಿನಿಮಾದ ಸಿಕ್ವೇಲ್ ಆಗಿದ್ದು, ‘ಮನಂ’, ‘ಪ್ರೇಮಂ’ ನಂತರ ಅಪ್ಪ ಮಗ (ನಾಗ ಚೈತನ್ಯ) ಈ ಚಿತ್ರದಲ್ಲಿ ಒಟ್ಟಾಗುತ್ತಿದ್ದಾರೆ. ‘ಸೊಗ್ಗಡೆ ಚಿನ್ನಿ ನಯನಾ’ ನಿರ್ದೇಶಿಸಿದ್ದ ಕಲ್ಯಾಣ್ ಕೃಷ್ಣ ಕುರಸಾಲಾ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಜೀ ಸ್ಟುಡಿಯೊ ಹಾಗೂ ನಾಗಾರ್ಜುನ್ ಅವರ ಅನ್ನಪೂರ್ಣ ಸ್ಟುಡಿಯೊ ಒಟ್ಟಾಗಿ ನಿರ್ಮಿಸುತ್ತಿವೆ.

ಸೊಗ್ಗಡೆ ಚಿನ್ನಿ ನಯನಾ ಕನ್ನಡಲ್ಲಿ ‘ಮತ್ತೆ ಹುಟ್ಟಿ ಬಾ ಉಪೇಂದ್ರ‘ ಎಂದು ರಿಮೇಕ್ ಆಗಿತ್ತು. ಅದರಲ್ಲಿ ಉಪೇಂದ್ರ ಹಾಗೂ ಪ್ರೇಮಾ ನಟನೆ ಗಮನ ಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT