ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಾಧವಾದ ಸಾಧನೆಗೈದು, ಎಲ್ಲರಿಗೂ ಮಾದರಿಯಾಗಿರುವ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಜನ್ಮಸ್ಮರಣೆಯಂದು ಗೌರವಪೂರ್ವಕ ನಮನಗಳು.
— Basavaraj S Bommai (@BSBommai) March 17, 2023
ಅಪ್ಪು ಸದಾ ಅಜರಾಮರ#PuneethRajkumar pic.twitter.com/FX4DpcHUqI
ಪ್ರತಿಭಾವಂತ ನಟನಾಗಿ, ಹೃದಯವಂತ ಸಮಾಜ ಸೇವಕನಾಗಿ ಕೋಟ್ಯಂತರ ಜನರ ಮನಸ್ಸಿಗೆ ಮುದ ನೀಡಿದ, ಸರಳತೆ, ಸಜ್ಜನಿಕೆ ಮತ್ತು ಮಾನವೀಯತೆಗೆ ಮತ್ತೊಂದು ಹೆಸರಾಗಿದ್ದ ಕನ್ನಡಿಗರೆಲ್ಲರ ಮನೆ ಮಗ ಪ್ರೀತಿಯ ಅಪ್ಪು ಅವರನ್ನು ಅವರ ಜನ್ಮದಿನದಂದು ಗೌರವದಿಂದ ನೆನೆಯುತ್ತೇನೆ. pic.twitter.com/PqObvEFwus
— Siddaramaiah (@siddaramaiah) March 17, 2023
ಪವರ್ ಸ್ಟಾರ್ ಉದಯಿಸಿದ ದಿನವಿಂದು. ಬಾಲನಟನಾಗಿ, ಗಾಯಕನಾಗಿ, ನಾಯಕನಾಗಿ ಕನ್ನಡಿಗರ ಮನೆ-ಮನಗಳನ್ನು ಆಳಿದ ಶ್ರೀ ಪುನೀತ್ ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಅಪಾರ. ಮರೆಯಾದ ಮಾಣಿಕ್ಯ ನಮ್ಮೆಲ್ಲರ ನೆನಪಲ್ಲಿ ಎಂದೆಂದಿಗೂ ಅಜರಾಮರ. ಪ್ರೀತಿಯ ಅಪ್ಪು ಅವರ ಹುಟ್ಟುಹಬ್ಬದಂದು ಹೃದಯಾಂತರಾಳದ ನಮನಗಳು.#PuneethRajkumar pic.twitter.com/AegMwvMRC1
— DK Shivakumar (@DKShivakumar) March 17, 2023
ಕನ್ನಡ ಚಿತ್ರರಂಗದ ಪ್ರಖ್ಯಾತ ನಟರು, ಕರ್ನಾಟಕ ರತ್ನ, ಮರೆಯಲಾಗದ ಮಾಣಿಕ್ಯ ಡಾ.ಪುನೀತ್ ರಾಜ್‌ಕುಮಾರ್ ಅವರ ಜನ್ಮಜಯಂತಿಯಂದು ಅವರಿಗೆ ಗೌರವ ನಮನಗಳು.
— Dr Sudhakar K (@mla_sudhakar) March 17, 2023
ಕನ್ನಡಿಗರ ಮನೆ-ಮನಸ್ಸುಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಪುನೀತ್ ಅವರ ಕಲಾ ಕ್ಷೇತ್ರದಲ್ಲಿನ ಸಾಧನೆ, ಸಾಮಾಜಿಕ ಕಾರ್ಯ, ನಗು ಹಾಗೂ ಜೀವನ ಪ್ರೀತಿ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. pic.twitter.com/Uty5XoHVVT
ಕರುನಾಡಿನ ಮನೆ ಮಗ ಡಾ. ಪುನೀತ್ ರಾಜ್‌ಕುಮಾರ್ ಅವರ ಜನ್ಮ ಸ್ಮರಣೆಯಿಂದು.
— Dr. Ashwathnarayan C. N. (@drashwathcn) March 17, 2023
ನಿಷ್ಕಲ್ಮಶ ನಗು ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಜನಮಾನಸದಲ್ಲಿ ಜೀವಂತವಾಗಿರುವ ನಮ್ಮೆಲ್ಲರ ಹೆಮ್ಮೆಯ ಅಪ್ಪು ಯುವಜನತೆಗೆ ಸದಾ ಸ್ಪೂರ್ತಿ.#ಸ್ಪೂರ್ತಿದಿನ #AppuLivesOn #InspirationDay pic.twitter.com/6GjUdKRMTW
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.