ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಕಿರುಚಿತ್ರೋತ್ಸವ 

Published 2 ಆಗಸ್ಟ್ 2023, 23:48 IST
Last Updated 2 ಆಗಸ್ಟ್ 2023, 23:48 IST
ಅಕ್ಷರ ಗಾತ್ರ

13ನೇ ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ ಇಂದಿನಿಂದ(ಆ.3) ಆಗಸ್ಟ್‌ 13ರ ವರೆಗೆ ನಡೆಯಲಿದೆ. ಭಾರತದಲ್ಲಿಯೇ ಮೊದಲ ಸಲ ಕಿರುಚಿತ್ರೋತ್ಸವವೊಂದಕ್ಕೆ ಆಸ್ಕರ್‌ ಮಾನ್ಯತೆ ದೊರೆತಿರುವುದು ಈ ಸಲ ಕಿರುಚಿತ್ರೋತ್ಸವದ ಹೆಗ್ಗಳಿಕೆಯಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಚಿತ್ರೋತ್ಸವ ಹೈಬ್ರಿಡ್‌ ಮಾದರಿಯಲ್ಲಿ ನಡೆಯಲಿದೆ. ಆಸಕ್ತರು www.bisff.in ತಾಣಕ್ಕೆ ಲಾಗಿನ್‌ ಆಗಿ ನಾಮನಿರ್ದೇಶನಗೊಂಡ ಕಿರುಚಿತ್ರಗಳನ್ನು ವೀಕ್ಷಿಸಬಹುದು. ಆ.10ರಿಂದ 13ವರೆಗೆ ಸುಚಿತ್ರ ಫಿಲ್ಮ್‌ ಸೊಸೈಟಿ ಹಾಗೂ ಗೋತೆ ಇನ್‌ಸ್ಟಿಟ್ಯೂಟ್‌ ಮ್ಯಾಕ್ಸ್‌ ಮುಲ್ಲರ್‌ ಭವನದಲ್ಲಿ ಸ್ಪರ್ಧಾ ವಿಭಾಗದಲ್ಲಿನ ಕಿರುಚಿತ್ರಗಳ ಪ್ರದರ್ಶನ ನಡೆಯಲಿದೆ. 

ಸುಮನ್‌ ಕಿತ್ತೂರು, ಅಲೆಜಾಂಡ್ರೊ ಗೊಂಜಾಲೆಜ್‌, ಡಿಯಾಗೊ ಫರೋನ್‌ ಅಂತರರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿನ ತೀರ್ಪುಗಾರರಾಗಿದ್ದಾರೆ. ಚೈತನ್ಯ ಹೆಗ್ಡೆ, ಶ್ರುತಿ ಹರಿಹರನ್‌, ಅಮಿತ್‌ ಮಸೂರ್‌ಕರ್‌ ಭಾರತೀಯ ವಿಭಾಗದ ಕಿರುಚಿತ್ರಗಳನ್ನು ನಿರ್ಣಯಿಸಲಿದ್ದಾರೆ. ಮಹಿಳೆಯರು ತಯಾರಿಸಿದ ಕಿರುಚಿತ್ರಗಳದ್ದೇ ವಿಶೇಷ ವಿಭಾಗವನ್ನು ಈ ವರ್ಷದಿಂದ ಪರಿಚಯಿಸಲಾಗಿದೆ. ‘ಯುವ ಸಿನಿಮಾ ತಯಾರಕರನ್ನು ಉತ್ತೇಜಿಸಲು, ಕಥೆ, ಚಿತ್ರಕಥೆಗಳನ್ನು ಪ್ರೋತ್ಸಾಹಿಸಲು ಬೇರೆ ಬೇರೆ ಸ್ಪರ್ಧಾ ವಿಭಾಗಗಳನ್ನು ಪರಿಚಯಿಸಲಾಗಿದೆ’ ಎಂದು ಕಿರುಚಿತ್ರೋತ್ಸವದ ನಿರ್ದೇಶಕ ಆನಂದ್‌ ವರದರಾಜನ್‌ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT