ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೌರಿ‘ ಸಾಕ್ಷ್ಯಚಿತ್ರಕ್ಕೆ ದಕ್ಷಿಣ ಏಷ್ಯಾ ಪ್ರಶಸ್ತಿ

Published 15 ಮೇ 2023, 20:41 IST
Last Updated 15 ಮೇ 2023, 20:41 IST
ಅಕ್ಷರ ಗಾತ್ರ

ಬೆಂಗಳೂರು: ಮಾಂಟ್ರಿಯಲ್‌ನ ದಕ್ಷಿಣ ಏಷ್ಯಾ ಚಲನಚಿತ್ರೋತ್ಸವದಲ್ಲಿ ಕವಿತಾ ಲಂಕೇಶ್‌ ನಿರ್ದೇಶನದ ‘ಗೌರಿ‘ ಸಾಕ್ಷ್ಯಚಿತ್ರಕ್ಕೆ ‘ಅತ್ಯುತ್ತಮ ದೀರ್ಘ ಸಾಕ್ಷ್ಯಚಿತ್ರ’ ಪ್ರಶಸ್ತಿ ಲಭಿಸಿದೆ.

2017ರಲ್ಲಿ ಹತ್ಯೆಗೊಳಗಾದ ಪತ್ರಕರ್ತೆ ಗೌರಿ ಲಂಕೇಶ್‌ ಕುರಿತು ಅವರ ಸಹೋದರಿ ಕವಿತಾ ಅವರು ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದ್ದರು. ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ‘ಆಲ್ ದಟ್‌ ಬ್ರೀಥ್ಸ್‌’ ಸಾಕ್ಷ್ಯಚಿತ್ರವೂ ಈ ಸ್ಪರ್ಧೆಯಲ್ಲಿದ್ದು, ‘ರನ್ನರ್ ಅಪ್‌’ ಪ್ರಶಸ್ತಿ ಪಡೆದಿದೆ.

‘ಆಮ್‌ಸ್ಟರ್‌ಡ್ಯಾಮ್‌ನ ಫ್ರೀ ಪ್ರೆಸ್‌ ಅನ್‌ಲಿಮಿಟೆಡ್‌‘  ಗೌರಿ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಸಹಕರಿಸಿತ್ತು. ವೃತ್ತಿಪರ ಸೇವೆಯ ಕಾರಣದಿಂದಾಗಿ ಹಿಂಸಾಚಾರಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ ಪತ್ರಕರ್ತರ ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸಲು ಸಂಸ್ಥೆ ಕೋರಿತ್ತು. ಸುಮಾರು 300 ಪ್ರಸ್ತಾವನೆಗಳು ಬಂದಿದ್ದವು. ಆಯ್ಕೆಯಾದ ನಾಲ್ಕು
ಚಿತ್ರಗಳಲ್ಲಿ ‘ಗೌರಿ’ ಸಾಕ್ಷ್ಯಚಿತ್ರವೂ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT