ಟೈಗರ್ ಶ್ರಾಫ್ ಅಭಿನಯದ ‘ಭಾಗಿ–3’ ಸಿನಿಮಾದ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದ್ದು, ವೈರಲ್ ಆಗಿದೆ. ಸಿಕ್ಸ್ ಪ್ಯಾಕ್ ಮೈಕಟ್ಟು ಈ ಪೋಸ್ಟರ್ನ ಹೈಲೈಟ್. ‘ಭಾಗಿ 1’ರಲ್ಲಿ ನಾಯಕಿಯಾಗಿದ್ದ ಶ್ರದ್ಧಾ ಕಪೂರ್ ಈ ಚಿತ್ರದಲ್ಲೂ ನಾಯಕಿಯಾಗಿ ಮುಂದುವರಿದಿದ್ದಾರೆ.

ಟೈಗರ್ ಶ್ರಾಫ್ ಜತೆ ಶ್ರದ್ಧಾ ಕಪೂರ್ ಕೂಡ ಸಖತ್ ಆಗಿ ಕಾಣುತ್ತಿದ್ದಾರೆ. ಚಿನ್ನದ ಮೈಬಣ್ಣದ ಫಿಲ್ಟರ್ನಲ್ಲಿ ಈ ಪೋಸ್ಟರ್ ತಯಾರಾಗಿದೆ. ಇಬ್ಬರು ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಹ್ಮದ್ ಖಾನ್ ನಿರ್ದೇಶನದ ಭಾಗಿ 3 ಚಲನಚಿತ್ರವು ಭಾಗಿ ಸರಣಿಯ ಮೂರನೇ ಚಿತ್ರ. ಹಿಂದಿನ ಚಿತ್ರಗಳಂತೆ ಈ ಚಿತ್ರದಲ್ಲಿಯೂ ಟೈಗರ್ ಶ್ರಾಫ್ ‘ರಾನಿ’ ಹೆಸರಿನ ಮುಖ್ಯಪಾತ್ರದಲ್ಲಿದ್ದಾರೆ.

ಈ ಹಿಂದೆ ಮೊದಲ ಪೋಸ್ಟರ್ ಅನ್ನುಟೈಗರ್ ಶ್ರಾಫ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿಹಂಚಿಕೊಂಡಿದ್ದರು. ಆನಂತರ ಫೆ.6ರಂದು ಭಾಗಿ –3 ಸಿನಿಮಾದ ಟ್ರೇಲರ್ ಬಿಡುಗಡೆಯಾಯಿತು. ಆ ದಿನ ಟ್ರೇಲರ್ ಬಿಡುಗಡೆಯಾದ 2 ಗಂಟೆಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರು. ಟ್ರೇಲರ್ ಬಿಡುಗಡೆಯ ದಿನವೇ ಮಾರ್ಚ್ 6 ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಘೋಷಿಸಿತ್ತು. ಸಿನಿಮಾ ಬಿಡುಗಡೆಗೆ ನಾಲ್ಕೈದು ದಿನಗಳು ಬಾಕಿ ಇರುವಂತೆ, ಮತ್ತೊಂದು ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

ಈ ಪೋಸ್ಟರ್ ಅನ್ನು ಶ್ರದ್ಧಾಕಪೂರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ’ಸಿನಿಮಾ ಬಿಡುಗಡೆಯಾಗುತ್ತಿದೆ. ಸೀಟು ಕಾಯ್ದಿರಿಸಿಕೊಳ್ಳಿ‘ ಎಂದು ಹೇಳಿದ್ದಾರೆ. ಈ ಚಿತ್ರವನ್ನು ಸಾಜಿದ್ ನಡಿಯಾವಾಲಾ ನಿರ್ಮಾಣ ಮಾಡಿದ್ದಾರೆ. ನಟಿ ಅಂಕಿತಾ ಲೋಖಂಡೆ, ರಿತೇಶ್ ದೇಶ್ಮುಖ್ ಸೇರಿದಂತೆ ಹಲವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.