ಬುಧವಾರ, ಜನವರಿ 27, 2021
16 °C
ಫೆಬ್ರುವರಿ ಮೊದಲ ವಾರ ಬಿಡುಗಡೆ

ಹೊಸ ತಂತ್ರಜ್ಞಾನದಲ್ಲಿ ಬರುತ್ತಿದ್ದಾರೆ ‘ಭಾಗ್ಯವಂತರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

1976ರಲ್ಲಿ ದ್ವಾರಕೀಶ್‌ ನಿರ್ಮಿಸಿದ್ದ ಚಿತ್ರ ಭಾಗ್ಯವಂತರು ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮರುಬಿಡುಗಡೆ ಆಗಲಿದೆ. ಈ ಚಿತ್ರ ಸಿನಿಮಾ ಸ್ಕೋಪ್‌ 7.1 ಡಿಐ ತಂತ್ರಜ್ಞಾನ ಒಳಗೊಂಡಿದೆ. ಮುನಿರಾಜು ಅವರು ಈ ಚಿತ್ರವನ್ನು ಹೊಸ ತಂತ್ರಜ್ಞಾನದಲ್ಲಿ ನಿರ್ಮಿಸಿದ್ದಾರೆ. ಮುನಿರಾಜು ಅವರು ‘ಕೃಷ್ಣಾಚಾರಿ’ ಚಿತ್ರದ ನಿರ್ಮಾಪಕರೂ ಹೌದು. ಮುನೇಶ್ವರ ಫಿಲ್ಮ್ಸ್ ಲಾಂಛನದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ಬೆಂಗಳೂರಿನ ನರ್ತಕಿ ಸೇರಿದಂತೆ ಕರ್ನಾಟಕದಾದ್ಯಂತ ‌100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರ ಫೆಬ್ರುವರಿ ಮೊದಲ ವಾರ ಬಿಡುಗಡೆಯಾಗಲಿದೆ.

ದಿವಂಗತ ಡಾ.ರಾಜಕುಮಾರ್ ಹಾಗೂ ಬಿ.ಸರೋಜಾದೇವಿ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದರು. ಭಾರ್ಗವ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದರು.

‘ನನಗೆ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಅವರ ಬಗ್ಗೆ ವಿಶೇಷ ಗೌರವ. ಅವರೇ ನನಗೆ ಭಾಗ್ಯವಂತರು’ ಎಂದು ಹೇಳುತ್ತಾರೆ ಮುನಿರಾಜು. ಹೇಳುತ್ತಾರೆ.

‘ಆಪರೇಷನ್ ಡೈಮಂಡ್ ರಾಕೆಟ್’, ‘ನಾನೊಬ್ಬ ಕಳ್ಳ’, ‘ರಾಜ‌ ನನ್ನ ರಾಜ’, ‘ದಾರಿ ತಪ್ಪಿದ ಮಗ’ ಮುಂತಾದ ಚಿತ್ರಗಳ ವಿತರಕರಾಗಿಯೂ ಮುನಿರಾಜು ಕೆಲಸ ಮಾಡಿದ್ದರು.  ಮುನಿರಾಜು ಅವರು ತಮ್ಮ ಮುನೇಶ್ವರ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು