ನಿರ್ದೇಶಕ ಎ. ಹರ್ಷ ಮತ್ತು ‘ಸೆಂಚುರಿ ಸ್ಟಾರ್’ ಶಿವರಾಜ್‌ಕುಮಾರ್ ಅವರ ಕಾಂಬಿನೇಷನ್‌ನಡಿ ನಿರ್ಮಾಣವಾಗುತ್ತಿರುವ ‘ಭಜರಂಗಿ 2’ ಚಿತ್ರ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ಈ ಹಿಂದೆ ಇಬ್ಬರ ಕಾಂಬಿನೇಷನ್‌ನಡಿ ತೆರೆಕಂಡಿದ್ದ ‘ಭಜರಂಗಿ’ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು.

ಇಂದು ಚಿತ್ರತಂಡ ‘ಭಜರಂಗಿ 2’ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದೆ. ಶಿವರಾಜ್‌ಕುಮಾರ್ ಅವರು ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

‘ಎಲ್ಲಾ ಕಣ್ಣುಗಳಿಂದ ಪ್ರಪಂಚ ಕಂಡರೆ ಕೆಲವು ‘ಕಣ್ಣುಗಳಲ್ಲೇ’ ಪ್ರಪಂಚ ಕಾಣ್ಸಿಬಿಡುತ್ತೆ! ಕಾಣದ್ದು ಕಂಡುಹಿಡಿಯಲು ಕಂಡದ್ದು ಕಾಯಲು ಭಜರಂಗಿ ಮತ್ತೆ ಬರುತ್ತಿದ್ದಾನೆ’ ಎಂದು ಚಿತ್ರತಂಡ ಹೇಳಿದೆ.

ಸಿನಿಮಾದಲ್ಲಿ ನಟಿಸುತ್ತಿರುವ ಕಲಾವಿದರು, ಮೇಕಿಂಗ್, ಕಥೆಯ ಬಗ್ಗೆ ನಿರ್ದೇಶಕ ಹರ್ಷ ಎಲ್ಲಿಯೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ, ಈ ಚಿತ್ರದ್ದು ‘ಭಜರಂಗಿ’ಯ ಮುಂದುವರಿದ ಕಥೆಯಲ್ಲ. ಕಥೆಯ ಎಳೆಯೇ ವಿಭಿನ್ನವಾದುದು ಎಂದು ಚಿತ್ರತಂಡ ಹೇಳಿಕೊಂಡಿದೆ.

ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಜೆ. ಸ್ವಾಮಿ ಅವರ ಛಾಯಾಗ್ರಹಣವಿದೆ. ದೀಪು ಎಸ್. ಕುಮಾರ್ ಅವರ ಸಂಕಲನವಿದೆ. ಜಯಣ್ಣ ಮತ್ತು ಭೋಗೇಂದ್ರ ಬಂಡವಾಳ ಹೂಡಿದ್ದಾರೆ.

‘ನೀವೆಲ್ಲರೂ ಕುತೂಹಲದಿಂದ ಕಾಯುತ್ತಿರುವ ಭಜರಂಗಿ 2 ಚಿತ್ರದ ನೆಕ್ಸ್ಟ್ ಲೆವೆಲ್ ಬೊಂಬಾಟ್ ಪೋಸ್ಟರ್ ಅನ್ನು ತಪ್ಪದೇ ಶೇರ್ ಮಾಡಿ’ ಎಂದು ಶಿವರಾಜ್‌ಕುಮಾರ್ ಅವರು ಅಭಿಮಾನಿಗಳಿಗೆ ಟ್ವಿಟ್ ಮೂಲಕ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.