ಈ ಸಲದ ಈದ್‌ಗೆ ಪ್ರೀತಿಯ ಸಿಹಿ...

ಬುಧವಾರ, ಮೇ 22, 2019
29 °C

ಈ ಸಲದ ಈದ್‌ಗೆ ಪ್ರೀತಿಯ ಸಿಹಿ...

Published:
Updated:
Prajavani

‘ಚಾಶ್ನಿ’ ಅಂದರೆ ಸಕ್ಕರೆಯ ಸಿಹಿ ಪಾಕ. ಇದೇ ಈದ್ ಹಬ್ಬಕ್ಕೆ ಬಿಡುಗಡೆಯಾಗಲಿರುವ ‘ಭಾರತ್’ ಸಿನಿಮಾದ ಹಾಡಿನಲ್ಲೂ ‘ಚಾಶ್ನಿ’ ಅನ್ನುವ ಪದವಿದೆ. ಹೆಸರಿಗೆ ತಕ್ಕಂತೆ ‘ತೇರೆ ಇಶ್ಕ್ ಚಾಶ್ನಿ’ ಅನ್ನುವ ಸಾಲುಗಳುಳ್ಳ ಈ ಹಾಡು ಈಗಾಗಲೇ ಸಲ್ಲೂ–ಕತ್ರೀನಾ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಏಪ್ರಿಲ್ 30ರಂದು ಬಿಡುಗಡೆಯಾಗಿರುವ ‘ಚಾಶ್ನಿ’ ಹಾಡಿನ ಪ್ರೊಮೊ ‘ಭಾರತ್’ ಸಿನಿಮಾದ ಸ್ವಾದ ಹೆಚ್ಚಿಸುವಂತಿದೆ. ಸಲ್ಮಾನ್ ಅಭಿನಯದ ಬಹುನಿರೀಕ್ಷಿತ ಚಿತ್ರವಾಗಿರುವ ‘ಭಾರತ್‌’ ಈಗಾಗಲೇ ಪ್ರೇಕ್ಷಕರಲ್ಲಿ ಅಪಾರ ಕುತೂಹಲ ಹುಟ್ಟುಹಾಕಿದೆ. 

ಈ ಹಿಂದೆ ದಿಶಾ ಪಟಾನಿ–ಸಲ್ಲೂ ಜತೆಗಿರುವ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಆ ಹಾಡಿನ ಜನಪ್ರಿಯತೆಯನ್ನೂ ಹಿಂದಿಕ್ಕುವ ಸೂಚನೆ ನೀಡಿರುವ ‘ಚಾಶ್ನಿ’ಯಲ್ಲಿ ಕತ್ರೀನಾ ಕೈಫ್ ಮೋಹಕವಾಗಿ ಕಾಣುತ್ತಾರೆ. ಸರೋವರದ ಮೇಲೆ ಶುಭ್ರ ಉಡುಪಿನಲ್ಲಿ ನಡೆದುಕೊಂಡು ಬರುವ ಕತ್ರೀನಾ, ಮತ್ತೊಂದು ದೃಶ್ಯದಲ್ಲಿ ಕಡುಹಸಿರು ಬಣ್ಣದ ಲೆಹೆಂಗಾದಲ್ಲಿ ಪ್ರೀತಿಯ ಹಸಿರು ಹೊನಲನ್ನೇ ಹರಿಸಿದ್ದಾರೆ. ಪ್ರೀತಿಯ ಅಮಲಿನಲ್ಲಿರುವ ಸಲ್ಮಾನ್ –ಕತ್ರೀನಾ ಜೋಡಿ ನೋಡುಗರ ಮನಸೂರೆಗೊಳ್ಳುವಂತಿದೆ. 

‘ಚಾಶ್ನಿ’ ಹಾಡಿನ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಸಲ್ಲೂ ‘ಈ ಸಲದ ಈದ್‌ಗೆ ಪ್ರೀತಿಯ ಸಿಹಿ....’ ಅನ್ನು ಪ್ರೇಮದ ಒಕ್ಕಣೆಯನ್ನೂ ಬರೆದುಕೊಂಡಿರುವುದು ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !