ಸೋಮವಾರ, ಆಗಸ್ಟ್ 2, 2021
28 °C

ಪರಿಸರ ಉಳಿಸಲು ಕರೆ ನೀಡಿದ ಬಾಲಿವುಡ್‌ ನಟಿ ಭೂಮಿ ಪಡ್ನೆಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಐದು ವರ್ಷದ ಹಿಂದೆ ‘ಧುಮ್ ಲಗಾ ಕೇ ಐಸ್ಯಾ’ ಚಿತ್ರದ ಮೂಲಕ ಬಾಲಿವುಡ್ ಅಂಗಳ ಪ್ರವೇಶಿಸಿದ ನಟಿ ಭೂಮಿ ಪಡ್ನೆಕರ್ ಹಲವು ಸೂಪರ್‌ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಾಗಿರುವ ಈಕೆ ಪರಿಸರ ಕಾರ್ಯಕರ್ತೆಯೂ ಹೌದು. ನಟನೆಯ ಜೊತೆಗೆ ‘ಕ್ಲೈಮೆಟ್‌ ವಾರಿಯರ್‌’ ಎಂಬ ಸ್ವಯಂಸೇವಾ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ಪರಿಸರ ಸಂರಕ್ಷಣೆ ಮಾಡುವುದೇ ಈ ಸಂಸ್ಥೆಯ ಮೂಲ ಗುರಿ.

ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಭೂಮಿ ಪಡ್ನೆಕರ್. ಜೂನ್‌ 5 ವಿಶ್ವ ಅಂತರರಾಷ್ಟ್ರೀಯ ಪರಿಸರ ದಿನ. ಪ್ರಸ್ತುತ ಪರಿಸರ ಮಾಲಿನ್ಯದಿಂದ ಜನರ ಬದುಕು ತತ್ತರಿಸಿ ಹೋಗಿದೆ. ಪ್ರತಿನಿತ್ಯವೂ ಮನುಷ್ಯ ಒಂದಲ್ಲಾ ಒಂದು ಸಮಸ್ಯೆಯ ಸುಳಿಗೆ ಸಿಲುಕುತ್ತಿದ್ದಾನೆ. ನೈಸರ್ಗಿಕ ವಿಪತ್ತುಗಳು ಸಂಭವಿಸಿದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಹಾಗಾಗಿ, ಭೂಮಿಯ ಸಂರಕ್ಷಣೆಗಾಗಿ ನೀವೇನು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸುತ್ತಾರೆ ಭೂಮಿ ಪಡ್ನೇಕರ್. ಪರಿಸರ ಸಂರಕ್ಷಣೆ ಮಾಡುವುದು ದೇಶದ ಪ್ರತಿಯೊಬ್ಬ ಪ್ರಜೆಯೂ ಮೂಲಭೂತ ಕರ್ತವ್ಯ ಎಂಬುದು ಅವರ ಸಲಹೆ.

ಪರಿಸರ ಉಳಿವಿಗಾಗಿ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಆಕೆ, ‘ಭಾರತ ಸೇರಿದಂತೆ ಇಡೀ ವಿಶ್ವವೇ ಪರಿಸರ ಮಾಲಿನ್ಯದಿಂದ ಆಪತ್ತಿಗೆ ಸಿಲುಕಿದೆ. ವಿಶ್ವದಾದ್ಯಂತ ಕಾಳ್ಗಿಚ್ಚು, ಬರ, ಪ್ರವಾಹ, ಹಿಮ ಕರಗುವಿಕೆ, ಸಮುದ್ರದಲ್ಲಿ ನೀರಿನ ಮಟ್ಟ ಏರುವಿಕೆ, ಆಹಾರ ಧಾನ್ಯಗಳ ನಾಶ, ಬಿಸಿಗಾಳಿಯ ಪ್ರಮಾಣ ಹೆಚ್ಚುತ್ತಿದೆ. ಇದು ಭವಿಷ್ಯದಲ್ಲಿ ಮನುಕುಲದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹಾಗಾಗಿ, ಎಲ್ಲರೂ ಎಚ್ಚೆತ್ತುಕೊಳ್ಳಲು ಇದು ಸಕಾಲ’ ಎಂದಿದ್ದಾರೆ.

ಈ ವಿಡಿಯೊ ಮೂಲಕ ಆಕೆ ನೂರಾರು ಅಭಿಮಾನಿಗಳು ಮತ್ತು ಪರಿಸರ ಸಂರಕ್ಷಕರ ಗಮನ ಸೆಳೆದಿದ್ದಾರೆ. ‘ಕ್ಲೈಮೆಟ್‌ ವಾರಿಯಸ್‌’ ಸಂಸ್ಥೆಯಡಿಯೇ ಬಾಲಿವುಡ್‌ನ ಖ್ಯಾತ ನಟ, ನಟಿಯರ ಮೂಲಕ ಪರಿಸರ ಸಂರಕ್ಷಣೆ ಸಂಬಂಧ ವಿಶ್ವದ ಪ್ರತಿಯೊಬ್ಬರಿಗೂ ಸಂದೇಶ ರವಾನಿಸಲು ನಿರ್ಧರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು