ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಚ್ಚುಗತ್ತಿ ಭರಮಣ್ಣ ನಾಯಕನಾಗಿ ರಾಜವರ್ಧನ್

Last Updated 12 ಡಿಸೆಂಬರ್ 2018, 7:13 IST
ಅಕ್ಷರ ಗಾತ್ರ

ಬಿ.ಎಲ್. ವೇಣು ಅವರ ‘ಬಿಚ್ಚುಗತ್ತಿ ಭರಮಣ್ಣ ನಾಯಕ’ ಕಾದಂಬರಿ ಆಧಾರಿತ ಚಿತ್ರ ಸೆಟ್ಟೇರಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದರ ಮುಹೂರ್ತ ನಡೆದಿದೆ. ಚಿತ್ರದ ಹೆಸರು ‘ಬಿಚ್ಚುಗತ್ತಿ’. ಇದರ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವವರು ರಾಜವರ್ಧನ್, ಹರಿಪ್ರಿಯಾ ಮತ್ತು ಪ್ರಭಾಕರ್.

‘ಬಿಚ್ಚುಗತ್ತಿ’ಯ ಚಿತ್ರಕಥೆ ಹಾಗೂ ಸಂಭಾಷಣೆಯ ಹೊಣೆಯನ್ನು ವೇಣು ಅವರೇ ಹೊತ್ತುಕೊಂಡಿದ್ದಾರೆ. ‘ಬಿಚ್ಚುಗತ್ತಿ ಭರಮಣ್ಣ ನಾಯಕ ನಡೆಸಿದ ದಂಗೆ ಈ ಸಿನಿಮಾದ ಕಥೆ. ಭರಮಣ್ಣ ನಾಯಕ ಚಿತ್ರದುರ್ಗ ಸೀಮೆಯಲ್ಲಿ ಬಹಳ ಜನಪ್ರಿಯ ವ್ಯಕ್ತಿ. ಆತನ ವ್ಯಕ್ತಿತ್ವ ಭಕ್ತಿ ಹಾಗೂ ಶಕ್ತಿಯ ಸಂಗಮ’ ಎಂದರು ವೇಣು.

ಈ ಚಿತ್ರದಲ್ಲಿ ನವರಸಗಳು ಇರಲಿವೆ. ಭರಮಣ್ಣ ಹಾಗೂ ಮುದ್ದಣ್ಣನ ಮುಖಾಮುಖಿ ಕೂಡ ಇದರಲ್ಲಿ ಇರಲಿದೆ ಎಂದು ತಿಳಿಸಿದರು. ಮುದ್ದಣ್ಣನ ಪಾತ್ರವನ್ನು ಪ್ರಭಾಕರ್ ನಿಭಾಯಿಸಲಿದ್ದಾರೆ. ‘ಇತಿಹಾಸ, ಸಾಹಿತ್ಯ ಹಾಗೂ ಸಿನಿಮಾ ಒಂದೇ ಅಲ್ಲ. ಹಾಗಾಗಿ, ಭರಮಣ್ಣನ ಕಥೆಯನ್ನು ಸಿನಿಮಾ ರೂಪದಲ್ಲಿ ಹೇಳುವಾಗ ಸಿನಿಮ್ಯಾಟಿಕ್‌ ಅಂಶಗಳನ್ನು ಸೇರಿಸಿಕೊಳ್ಳಲಾಗುತ್ತದೆ’ ಎಂಬುದನ್ನು ಸ್ಪಷ್ಟಪಡಿಸಿದರು ವೇಣು.

ಚಿತ್ರದ ನಿರ್ದೇಶನದ ಹೊಣೆ ಹೊತ್ತವರು ಹರಿ ಸಂತೋಷ್. ‘ಸಿನಿಮಾದಲ್ಲಿ ವಿಜೃಂಭಣೆ ಇರುವುದಿಲ್ಲ. ಚಿತ್ರದ ಬಹುತೇಕ ದೃಶ್ಯಗಳ ಚಿತ್ರೀಕರಣ ಸೆಟ್‌ಗಳಲ್ಲಿ ನಡೆಯಲಿದೆ. ಕೆಲವಷ್ಟು ದೃಶ್ಯಗಳನ್ನು ಚಿತ್ರದುರ್ಗದ ಕೋಟೆಯಲ್ಲಿ ಚಿತ್ರೀಕರಿಸಲಾಗುತ್ತದೆ. ನೂರು ದಿನಗಳ ಚಿತ್ರೀಕರಣ ನಡೆಸಬೇಕಿದೆ’ ಎಂದರು ಸಂತೋಷ್. ಚಿತ್ರದಲ್ಲಿ ಸಂದರ್ಭಕ್ಕೆ ಅಗತ್ಯವಿರುವಷ್ಟು ಹಾಡುಗಳು ಮಾತ್ರ ಇರಲಿವೆಯಂತೆ.

ಹರಿಪ್ರಿಯಾ ಅವರು ಸಿದ್ಧಾಂಬೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ವರ್ಷಗಳ ಹಿಂದೆ ಕಲಿತಿದ್ದ ಕುದುರೆ ಸವಾರಿ ವಿದ್ಯೆ ಈ ಚಿತ್ರದಲ್ಲಿ ಕೆಲಸಕ್ಕೆ ಬರಲಿದೆ. ‘ನನಗೆ ಇತಿಹಾಸದ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ, ಈ ಚಿತ್ರದಲ್ಲಿ ಐತಿಹಾಸಿಕ ಪಾತ್ರವೊಂದು ಸಿಕ್ಕಿರುವುದು ನನ್ನ ಅದೃಷ್ಟ. ನಾನು ಬೇರೆ ಬೇರೆ ಬಗೆಯ ಪಾತ್ರಗಳ ಹುಡುಕಾಟದಲ್ಲಿ ಇದ್ದಾಗ ಇದು ಸಿಕ್ಕಿದೆ’ ಎಂದರು ಹರಿಪ್ರಿಯಾ.

ಹರಿಪ್ರಿಯಾ
ಹರಿಪ್ರಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT