ಬುಧವಾರ, ಅಕ್ಟೋಬರ್ 5, 2022
26 °C

BiggBoss Kannada OTT | ನನ್ನ ಇನ್ನೊಂದು ಖಾಸಗಿ ವಿಡಿಯೊ ಬರಬಹುದು: ಸೋನು ಗೌಡ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬಿಗ್‌ಬಾಸ್ ಕನ್ನಡ ಮೊದಲ ಒಟಿಟಿ ಆವೃತ್ತಿಗೆ ಅದ್ದೂರಿ ಚಾಲನೆ ಸಿಕ್ಕಿದೆ. ದೊಡ್ಡ ಮನೆಯಲ್ಲಿ 16 ಸ್ಪರ್ಧಿಗಳಿದ್ದು, ವಿವಿಧ ಟಾಸ್ಕ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳ ಸ್ಟಾರ್‌ ಎಂದೇ ಕರೆಯುವ ಸೋನು ಶ್ರೀನಿವಾಸ್‌ ಗೌಡ ಅವರು ದೊಡ್ಡ ಮನೆಯಲ್ಲಿ ತಮ್ಮ ಖಾಸಗಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಓದಿ: BiggBoss Kannada OTTಗೆ ಚಾಲನೆ: 16 ಸ್ಪರ್ಧಿಗಳ ಪೂರ್ಣ ಮಾಹಿತಿ ಇಲ್ಲಿದೆ

ಟಿಕ್ ಟಾಕ್ ಮತ್ತು ರೀಲ್ಸ್ ವಿಡಿಯೊಗಳ ಮೂಲಕ ಗಮನ ಸೆಳೆದಿದ್ದ ಸೋನು ಅವರ ಖಾಸಗಿ ವಿಡಿಯೊ ಈ ಹಿಂದೆ ಲೀಕ್‌ ಆಗಿತ್ತು. ಅದರ ಬಗ್ಗೆ ದೊಡ್ಡ ಮನೆಯಲ್ಲಿ ಮಾತನಾಡಿದ್ದಾರೆ.

ನನ್ನ ಪರಿಚಯದ ವ್ಯಕ್ತಿ ಜೊತೆ ನಾನು 3 ವರ್ಷ ಇದ್ದೆ. ಅವನು ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ಹೋದ. ಈ ವೇಳೆ ಅವನು ಮತ್ತು ನಾನು ವಿಡಿಯೊ ಕಾಲ್‌ ಮಾಡುತ್ತಿದ್ದೇವು. ನನ್ನ ಖಾಸಗಿ ವಿಡಿಯೊವನ್ನು ಅವನು ಲೀಕ್‌ ಮಾಡಿದ್ದ.  ವಿಡಿಯೊ ಬಿಡುಗಡೆ ಮಾಡಿ ನನ್ನ ಬ್ಲ್ಯಾಕ್‌ ಮೇಲ್‌ ಮಾಡಿದ್ದ. ಇನ್ನೊಂದು ವಿಡಿಯೊವನ್ನು ಯಾವಾಗ ಬಿಡುಗಡೆ ಮಾಡುತ್ತಾನೊ ಗೊತ್ತಿಲ್ಲ ಎಂದು ಸೋನು ಹೇಳಿದ್ದಾರೆ.

ಆ ವಿಡಿಯೊ ಬಿಡುಗಡೆಯಾದಗಿನಿಂದ ನಾನು ಅಪ್ಪನ ಮನೆಗೆ ಹೋಗಿಲ್ಲ. ಅವರಿಗೆ ನನ್ನ ಮುಖ ತೋರಿಸಲು ಆಗಿಲ್ಲ. ನಾನು ತಪ್ಪು ಮಾಡಿ ಬಿಟ್ಟೆ. ಮನೆಯ ಮಾನ ಮರ್ಯಾದೆ ತೆಗೆದು ಬಿಟ್ಟೆ. ನಮ್ಮ ಸಂಬಂಧಿಕರು ಕೂಡ ನನ್ನ ಸಿಕ್ಕಾಪಟ್ಟೆ ಬೈಯ್ದು ಬಿಟ್ಟರು. ಈ ಘಟನೆಯಿಂದಾಗಿ ನಾನು ಮನೆಗೆ ಹೋಗಿಲ್ಲ ಎಂದು ಸೋನು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ:  ನನ್ನ ಲೈಂಗಿಕ ಜೀವನ ಆಸಕ್ತಿದಾಯಕವಾಗಿಲ್ಲದ ಕಾರಣ ಕರಣ್​ ನನ್ನ ಕರೆಯಲ್ಲ: ತಾಪ್ಸಿ 

ಈ ರೀತಿ ಯಾವ ಹುಡುಗಿಗೂ ಆಗಬಾರದು, ಯಾವುದೇ ಸಮಸ್ಯೆಗಳು ಬರಲಿ, ಹುಡುಗಿಯರು ಧೈರ್ಯದಿಂದ ಇರಬೇಕು ಎಂದು ಹೇಳಿದ್ದಾರೆ. ಅಲ್ಲದೇ ನಾನು ಟ್ರೋಲ್‌ಗಳಿಂದ ಬೆಳೆದಿಲ್ಲ ಎಂದಿರುವ ಅವರು ನನಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ ಎಂದು ಸೋನು ಹೇಳಿದ್ದಾರೆ. 

ದೊಡ್ಡ ಮನೆಯಲ್ಲಿ ಸೋನು ಗೌಡ ಯಾವ ರೀತಿ ಟಾಸ್ಕ್‌ ಮಾಡುತ್ತಾರೆ? ಹೇಗೆ ಇರುತ್ತಾರೆ? ಎಂಬುದನ್ನು ಕಾದು ನೋಡಬೇಕು.

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು