ಶುಕ್ರವಾರ, ನವೆಂಬರ್ 22, 2019
21 °C

ದೀಪಾವಳಿಗೆ ‘ಬಿಗಿಲ್‌’ ವರ್ಸಸ್‌ ‘ಕೈದಿ’ ಫೈಟ್

Published:
Updated:

ಈ ದೀಪಾವಳಿಗೆ ವಿಜಯ್ ಅಭಿನಯದ ಬಿಗಿಲ್‌ ಹಾಗೂ ಕಾರ್ತಿ ನಟನೆಯ ಕೈದಿ ಸಿನಿಮಾ ಒಂದೇ ದಿನ ಬಿಡುಗಡೆಯಾಗುತ್ತಿದೆ. ಈ ಎರಡೂ ಚಿತ್ರಗಳು ಅಕ್ಟೋಬರ್‌ 25ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಸಂಘರ್ಷ ನಡೆಯಲಿದೆಯೇ ಎಂದು ಕಾದು ನೋಡಬೇಕಿದೆ.

ಆರಂಭದಿಂದಲೇ ಈ ಎರಡೂ ಚಿತ್ರಗಳು ಮೇಕಿಂಗ್‌ ಹಾಗೂ ವಿಭಿನ್ನ ಚಿತ್ರಕತೆಗಳಿಂದ ನಿರೀಕ್ಷೆ ಹುಟ್ಟುಹಾಕಿದ್ದ ಚಿತ್ರಗಳು. ಈ ಎರಡೂ ಚಿತ್ರಗಳ ಬಗ್ಗೆ ಉತ್ತಮ ಮಾತುಗಳು ಹಾಗೂ ಟ್ರೇಲರ್‌, ಟೀಸರ್‌ಗಳಿಗೆ ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿದ್ದವು. 

ಈ ಎರಡೂ ಚಿತ್ರಗಳು ದೀಪಾವಳಿಗೆ ಬಿಡುಗಡೆಯಾಗಲಿವೆ ಎಂದು ಮೊದಲು ಘೋಷಣೆ ಮಾಡಿದ್ದರು. ದೀಪಾವಳಿ (ಅಕ್ಟೋಬರ್‌ 27) ಭಾನುವಾರ ಬಂದಿರುವುದರಿಂದ ಶುಕ್ರವಾರವೇ ಸಿನಿಮಾ ಬಿಡುಗಡೆ ಮಾಡಲು ಎರಡು ಚಿತ್ರ ತಂಡಗಳು  ನಿರ್ಧರಿಸಿವೆ.

ಕೆಲ ದಿನಗಳ ಹಿಂದೆ ಕೈದಿ ಸಿನಿಮಾದ ನಿರ್ದೇಶಕ ಲೋಕೆಶ್‌ ಕನಕರಾಜ್‌ ಅವರು ಅಕ್ಟೋಬರ್‌ 25ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಟ್ವಿಟರ್‌ನಲ್ಲಿ ಘೋಷಿಸಿದ್ದರು. ಅದಾಗಿ ಒಂದು ಗಂಟೆ ಬಳಿಕ, ಬಿಗಿಲ್‌ ಚಿತ್ರದ ಬಿಡುಗಡೆ ದಿನವನ್ನು ಬಿಗಿಲ್‌ ತಂಡ ಘೋಷಣೆ ಮಾಡಿತ್ತು.

ಮೂಹೂರ್ತ ದಿನದಿಂದಲೂ ದೊಡ್ಡ ಮಟ್ಟದಿಂದ ಸದ್ದು ಮಾಡಿರುವ ಈ ಎರಡು ಚಿತ್ರಗಳನ್ನು ಒಂದೇ ದಿನ ಬಿಡುಗಡೆ ಮಾಡಲು ನಿರ್ಧರಿಸಿರುವ ನಿರ್ಮಾಪಕರ ನಿರ್ಧಾರದ ಬಗ್ಗೆ ಬಹುತೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)