ಸೋಮವಾರ, ಆಗಸ್ಟ್ 8, 2022
22 °C

ಶೀಘ್ರದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀವನಾಧಾರಿತ ಚಿತ್ರ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನಾಧಾರಿತ ಚಿತ್ರವೊಂದು ಶೀಘ್ರದಲ್ಲೇ ಸೆಟ್ಟೇರಲಿದೆ.

ನಿರ್ಮಾಪಕರಾಗಿರುವ ವಿನೋದ್ ಭಾನುಶಾಲಿ ಮತ್ತು ಸಂದೀಪ್ ಸಿಂಗ್ ಅವರು ವಾಜಪೇಯಿ ಜೀವನಾಧಾರಿತ ಚಿತ್ರವನ್ನು ನಿರ್ಮಿಸಲಿದ್ದಾರೆ.

ಅಟಲ್ ಜೀವನಾಧಾರಿತ ಚಿತ್ರಕ್ಕೆ ‘ಮೇ ರಹೂನ್ ಯಾ ನಾ ರಹೂನ್, ಯೇ ದೇಶ್ ರೆಹನಾ ಚಾಹಿಯೇ– ಅಟಲ್‘ ಎಂದು ಹೆಸರಿಡಲಾಗಿದೆ.

ಲೇಖಕ ಉಲ್ಲೇಖ್ ಎನ್‌ ಪಿ ಬರೆದಿರುವ ‘ದಿ ಅನ್‌ಟೋಲ್ಡ್ ವಾಜಪೇಯಿ: ಪೊಲಿಟೀಶಿಯನ್ ಆ್ಯಂಡ್ ಪ್ಯಾರಾಡಾಕ್ಸ್‘ ಹೆಸರಿನ ಪುಸ್ತಕ ಆಧರಿಸಿ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ.

ಚಿತ್ರದ ನಾಯಕ ನಟ ಮತ್ತು ನಿರ್ದೇಶಕರ ಆಯ್ಕೆ ಇನ್ನೂ ಆಗಿಲ್ಲ. ಶೀಘ್ರದಲ್ಲೇ ಅದನ್ನು ಘೋಷಿಸಲಾಗುವುದು ಎಂದು ನಿರ್ಮಾಪಕರು ಹೇಳಿದ್ದು, 2023ರ ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಗುರಿ ಹೊಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು