ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಬಿಪಾಶಾ ಬಸು: ‘ಬೇಬಿ ಬಂಪ್‘ ಫೋಟೊ ಹಂಚಿಕೊಂಡ ನಟಿ

Last Updated 16 ಆಗಸ್ಟ್ 2022, 11:30 IST
ಅಕ್ಷರ ಗಾತ್ರ

ಮುಂಬೈ:ಬಾಲಿವುಡ್ ಹಾಟ್ ಬ್ಯೂಟಿ ಬಿಪಾಶಾ ಬಸು ಸಾಮಾಜಿಕ ಮಾಧ್ಯಮಗಳಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿತಾನು ತಾಯಿಯಾಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಸೇರಿದಂತೆ ಫಾಲೋವರ್ಸ್‌ಗಳು ಶುಭಾಶಯ ಕೋರಿದ್ದಾರೆ.

ಮಂಗಳವಾರ ಇನ್‌ಸ್ಟಾಗ್ರಾಂನಲ್ಲಿ ಬಿಪಾಶಾ ‘ಬೇಬಿ ಬಂಪ್‌‘ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪತಿಕರಣ್ ಸಿಂಗ್ ಗ್ರೋವರ್ ಅವರು ಬಿಪಾಶಾ ‘ಬಂಪ್‌‘ಗೆ ಚುಂಬಿಸುತ್ತಿದ್ದಾರೆ. ಗ್ರೋವರ್‌ ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಬಿಪಾಶಾಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದೀಗ ತಾವುಗರ್ಭಿಣಿಯಾಗಿರುವುದನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಫೋಟೊವನ್ನು ಹಂಚಿಕೊಳ್ಳುವುದರ ಜೊತೆಗೆಭಾವನಾತ್ಮಕ ಟಿಪ್ಪಣಿಯನ್ನು ಬರೆದುಕೊಂಡಿದ್ದಾರೆ. ‘ಇದು ಹೊಸ ಸಮಯ, ಹೊಸ ಹಂತ, ಹೊಸ ಭಾವನೆ. ನಮ್ಮ ಜೀವನದಲ್ಲಿ ಹೆಚ್ಚಿನ ಸಂತೋಷವು ಬರಲಿದೆ. ಶೀಘ್ರದಲ್ಲೇ ಮಗು ನಮ್ಮನ್ನು ಸೇರಲಿದೆ. ಈಗ ನಾವು ಮತ್ತೆ ಹೊಸ ಜೀವನ ಪ್ರಾರಂಭಿಸುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ.

ನಿಮಗೆಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಬೆಂಬಲ ಸದಾ ಹೀಗೆ ಇರಲಿ ಎಂದು ಬಯಸುತ್ತೇನೆ ಎಂದು ಬಿಪಾಶಾ ಬರೆದುಕೊಂಡಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT