ಮಂಗಳವಾರ, ಏಪ್ರಿಲ್ 7, 2020
19 °C

Happy Birthday ಟೈಗರ್‌ ಶ್ರಾಫ್: 'ಗೆಟ್‌ ರೆಡಿ ಟು ಫೈಟ್' ಥೀಮ್‌ ಸಾಂಗ್...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಟೈಗರ್‌ ಶ್ರಾಫ್ ಹುಟ್ಟಿದ ದಿನದ (ಮಾರ್ಚ್‌ 2) ಖುಷಿಯನ್ನು ‘ಭಾಗಿ–3’ ಸಿನಿಮಾದ ಥೀಮ್‌ ಸಾಂಗ್‌ ಬಿಡುಗಡೆ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

‘ಗೆಟ್‌ ರೆಡಿ ಟು ಫೈಟ್’ ಹಾಡನ್ನು ಟೈಗರ್‌ ಶ್ರಾಫ್‌ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಿಮ್ಮೆಲ್ಲರಿಗೆ ಇದು ಇಷ್ಟವಾಗಲಿದೆ ಎಂದು #GetReadyToFight ಹ್ಯಾಶ್‌ಟ್ಯಾಗ್‌ ಮೂಲಕ ವಿಡಿಯೊ ಹಂಚಿಕೊಂಡಿದ್ದಾರೆ. ಹಾಡು ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ನೂರಾರು ಬಾರಿ ರೀಟ್ವೀಟ್‌ ಆಗಿದೆ.

ಅನ್‌ಸೀನ್ ವಿಶ್ಯುವೆಲ್‌ ಈ ಹಾಡಿನ ಪೋಸ್ಟರ್‌ ಅನ್ನು ಶ್ರದ್ಧಾಕಪೂರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ’ಸಿನಿಮಾ ಬಿಡುಗಡೆಯಾಗುತ್ತಿದೆ. ಸೀಟು ಕಾಯ್ದಿರಿಸಿಕೊಳ್ಳಿ‘ ಎಂದು ಹೇಳಿದ್ದಾರೆ.

ಈ ಹಿಂದೆ ಮೊದಲ ಪೋಸ್ಟರ್‌ ಅನ್ನು ಟೈಗರ್‌ ಶ್ರಾಫ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿಹಂಚಿಕೊಂಡಿದ್ದರು. ಇದರಲ್ಲಿ ಟೈಗರ್‌ ಶ್ರಾಫ್ ಮತ್ತು ಶ್ರದ್ಧಾ ಕಪೂರ್‌ ಕಾಣಿಸಿಕೊಂಡಿದ್ದರು. ಚಿನ್ನದ ಮೈಬಣ್ಣದ ಫಿಲ್ಟರ್‌ನಲ್ಲಿ ಈ ಪೋಸ್ಟರ್‌ ಅನ್ನು ಕ್ರಿಯೇಟ್ ಮಾಡಲಾಗಿತ್ತು.

ಶ್ರದ್ಧಾ ಮತ್ತು ಟೈಗರ್‌ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಹ್ಮದ್ ಖಾನ್ ನಿರ್ದೇಶನದ ಭಾಗಿ 3 ಚಲನಚಿತ್ರವು ಭಾಗಿ ಸರಣಿಯ ಮೂರನೇ ಚಿತ್ರ. ಹಿಂದಿನ ಚಿತ್ರಗಳಂತೆ ಈ ಚಿತ್ರದಲ್ಲಿಯೂ ಟೈಗರ್ ಶ್ರಾಫ್ ‘ರಾನಿ’ ಹೆಸರಿನ ಮುಖ್ಯಪಾತ್ರದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು