‘ಸಾರಾ’ಸಗಟು ಸ್ನೇಹ ಕೈಬಿಟ್ಟ!

ಶುಕ್ರವಾರ, ಏಪ್ರಿಲ್ 26, 2019
32 °C

‘ಸಾರಾ’ಸಗಟು ಸ್ನೇಹ ಕೈಬಿಟ್ಟ!

Published:
Updated:
Prajavani

ಅವರಿಬ್ಬರೂ ಸೊಂಟ ಬಳಸಿಕೊಂಡು ಸರಸವಾಡುತ್ತಾ ಎಷ್ಟೋ ಬೀದಿಗಳಲ್ಲಿ ಸುತ್ತಾಡಿದ್ದಾರೆ. ಮೋಂಬತ್ತಿಯ ಮಂದ ಬೆಳಕಿನಲ್ಲಿ ಚುಕ್ಕಿಗಳತ್ತ ಕಣ್ಣು ಮಿಟುಕಿಸುತ್ತಾ ತುತ್ತು ಹಂಚಿಕೊಂಡಿದ್ದಾರೆ. ಇಬ್ಬರ ನಡುವೆ ಬರಿಯ ಸ್ನೇಹವಲ್ಲ ‘ಬೇರೇನೋ’ ನಡೆಯುತ್ತಿದೆ ಎಂದು ಬಾಲಿವುಡ್‌ ಗಲ್ಲಿಗಳಲ್ಲಿ ಗಾಸಿಪ್‌ ಹರಿದಾಡಿದೆ. 

ಅದೇ ಬಾಲಿವುಡ್‌ ಗಲ್ಲಿ ಹೋಳಿಯ ಬಣ್ಣಗಳಲ್ಲಿ ಮಿಂದೇಳುತ್ತಿರುವಾಗ ಅವರಿಬ್ಬರ ಬಂಧದ ಬಣ್ಣ ಕಳಚಿಕೊಂಡಿದೆ. ‘ಕೇದಾರನಾಥ’ದಲ್ಲಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸಿದ ಜೋಡಿ ಸುಶಾಂತ್‌ ಸಿಂಗ್ ರಜಪೂತ್‌ ಮತ್ತು ಸಾರಾ ಅಲಿ ಖಾನ್‌ ಮಧ್ಯೆ ಈಗ ಸ್ನೇಹವೂ ಉಳಿದಿಲ್ಲ. ಹೋಳಿ ಹಬ್ಬದ ದಿನ ಸುಶಾಂತ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ಸಾರಾ ಅವರನ್ನು ಕಿಕ್‌ ಔಟ್‌ ಮಾಡಿದ್ದಾರೆ.

ಈ ಹಿಂದೆ, ‘ಕಾಫಿ ವಿತ್‌ ಕರಣ್‌’ ಶೋನಲ್ಲಿ, ‘ಡೇಟಿಂಗ್‌ ಮಾಡಲು ಬಯಸುವ ಹೀರೊ ಯಾರು’ ಎಂದು ಕರಣ್‌ ಜೋಹರ್ ಕೇಳಿದಾಗ ‘ಕಾರ್ತಿಕ್‌ ಆರ್ಯನ್‌’ ಎಂದು ಪಟ್‌ ಅಂತ ಉತ್ತರಿಸಿದ್ದರು ಸಾರಾ. ಆ ಬಳಿಕ ಕಾರ್ತಿಕ್‌ ಮೇಲಿನ ಮೋಹವನ್ನು ಕಂಡಕಂಡಲ್ಲಿ ಹೇಳಿಕೊಂಡು ಬಂದಿದ್ದರು. ಆದರೆ ಕಾರ್ತಿಕ್‌ ಮಾತ್ರ ತಣ್ಣಗಿದ್ದರು. 

ಇದೀಗ, ಅದೇ ಕಾರ್ತಿಕ್‌ ಜೊತೆ ಸಾರಾ ಡುಯೆಟ್‌ ಹಾಡುತ್ತಿದ್ದಾರೆ. ಇಮ್ತಿಯಾಜ್‌ ಅಲಿ ನಿರ್ದೇಶನದ ಹೊಸ ಚಿತ್ರದಲ್ಲಿ ಈ ಜೋಡಿ ಒಂದಾಗಿದೆ. ಅಲ್ಲದೆ, ಇಬ್ಬರು ಆಪ್ತ ಕ್ಷಣಗಳನ್ನು ಕಳೆಯುತ್ತಿದ್ದಾರೆ ಎಂದು ಬಾಲಿವುಡ್‌ನ ಗಾಸಿಪ್‌ವೀರರು ಹೇಳುತ್ತಿದ್ದಾರೆ.

ಸುಶಾಂತ್‌ ಜೊತೆ ಪ್ರೇಮಾಂಕುರವಾಗುತ್ತಿದೆಯೇ ಎಂದು ಬಿ ಟೌನ್‌ ಹುಬ್ಬೇರಿಸುತ್ತಿರುವ ಹೊತ್ತಿಗೇ ಕಾರ್ತಿಕ್‌ ಎಂಟ್ರಿಯಾಗಿದ್ದಾರೆ. ತನ್ನ ಕನಸುಗಾರನ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿರುವುದು ಸಾರಾಗೆ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಾಗಿದೆ. ಹೀಗಿರುವಾಗಲೇ ಸುಶಾಂತ್‌ ಮುನಿಸಿಕೊಂಡು ಸಾರಾಳನ್ನು ಸಾರಾಸಗಟಾಗಿ ಸ್ನೇಹವಲಯದಿಂದ ಕಿತ್ತುಹಾಕಿರುವುದು ಅವರಿಬ್ಬರ ನಡುವಿನ ನಂಟಿನ ಬಗ್ಗೆ ಪ್ರಶ್ನೆಗಳನ್ನು ಹೆಚ್ಚಿಸುತ್ತಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !