ಸೋಮವಾರ, ಜುಲೈ 4, 2022
21 °C

ರಾಮ– ಸೀತೆಯಾಗಿ ಹೃತಿಕ್‌, ದೀಪಿಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡ ಬಜೆಟ್‌ ಚಿತ್ರ ‘ರಾಮಾಯಣ’ದಲ್ಲಿ ಹೃತಿಕ್‌ ರೋಷನ್‌ ಹಾಗೂ ದೀಪಿಕಾ ಪಡುಕೋಣೆ ರಾಮ– ಸೀತೆಯಾಗಿ ಅಭಿನಯಿಸಲಿದ್ದಾರೆ. ರಾಮ ಪಾತ್ರಕ್ಕಾಗಿ ಈಗಾಗಲೇ ಹೃತಿಕ್‌ ರೋಷನ್‌ ಒಪ್ಪಿಕೊಂಡಿದ್ದು, ದೀಪಿಕಾ ಪಡುಕೋಣೆ ಜೊತೆ ಮಾತುಕತೆ ಹಂತದಲ್ಲಿದೆ. 

ನಿತೇಶ್‌ ತಿವಾರಿ ನಿರ್ದೇಶನದ ಪೌರಾಣಿಕ ಸಿನಿಮಾ ‘ರಾಮಾಯಣ’ ಸಾಹಸ ಪ್ರಧಾನ ಚಿತ್ರ. ದೀಪಿಕಾ ಕೂಡ ನಟಿಸಲು ಒಪ್ಪಿಕೊಂಡರೆ ಇದೇ ಮೊದಲ ಬಾರಿಗೆ ಹೃತಿಕ್‌ ಹಾಗೂ ದೀಪಿಕಾ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. 

ಈ ಚಿತ್ರವನ್ನು ₹500 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಭಾರಿ ಸೆಟ್‌ ಹಾಕಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ. ಹಿಂದಿ, ತೆಲುಗು, ತಮಿಳಿನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. 

ಸದ್ಯ ಹೃತಿಕ್‌ ಅಭಿನಯದ ‘ಸೂಪರ್‌ 30’ ಸಿನಿಮಾವು ಬಾಕ್ಸಾಫೀಸಿನಲ್ಲಿ ಹಿಟ್‌ ಆಗಿದೆ. ಅವರು ಟೈಗರ್‌ ಶ್ರಾಫ್‌ ಜೊತೆ ‘ವಾರ್‌’ ಹಾಗೂ ‘ಕ್ರಿಶ್‌ 4’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ, ನಿರ್ದೇಶಕಿ ಮೇಘನಾ ಗುಲ್ಜಾರ್ ಅವರ ಹೊಸ ಸಿನಿಮಾ 'ಛಪಾಕ್' ಹಾಗೂ ಕಬೀರ್‌ ಖಾನ್‌ ನಿರ್ದೇಶನದ ‘83’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು