ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಪೃಥ್ವಿರಾಜ್’ ಸಿನಿಮಾ ಜೂನ್ 10ರಂದು ಬಿಡುಗಡೆಯಾಗಲಿದೆ.

ಈ ಹಿಂದೆ ಜ.21ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು.

ಸಿನಿಮಾ ಬಿಡುಗಡೆ ಕುರಿತು ಟ್ವೀಟ್ ಮಾಡಿರುವ ಅಕ್ಷಯ್, ‘ಜೂನ್ 10ರಂದು ‘ಪೃಥ್ವಿರಾಜ್’ ಸಿನಿಮಾ ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ತೆರೆಕಾಣಲಿದೆ’ ಎಂದು ಬರೆದುಕೊಂಡಿದ್ದು, ಪೋಸ್ಟರ್ ಮತ್ತು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಪೃಥ್ವಿರಾಜ್ ಸಿನಿಮಾವನ್ನು ಬರಹಗಾರ-ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶಿಸಿದ್ದಾರೆ. ಇದನ್ನು 'ಯಶ್ ರಾಜ್ ಫಿಲ್ಮ್ಸ್' ನಿರ್ಮಾಣ ಮಾಡಿದ್ದು, ಪೃಥ್ವಿರಾಜ್ ಚೌಹಾಣ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದರೆ, ಅವರ ಎದುರು ಸನ್ಯೋಗಿತಾ ಪಾತ್ರದಲ್ಲಿ 2017ರ ಮಿಸ್ ವರ್ಲ್ಡ್ ವಿಜೇತೆ ಮಾನುಷಿ ಚಿಲ್ಲರ್ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಸಂಜಯ್ ದತ್, ಸೋನು ಸೂದ್ ಕೂಡ ನಟಿಸಿದ್ದಾರೆ.

ಓದಿ... ಆಲಂಗಿಸುವುದು, ಚುಂಬಿಸುವುದು ರಣವೀರ್ಗೆ ಇಷ್ಟ: ದೀಪಿಕಾ ಪಡುಕೋಣೆ

ಯಶ್ ರಾಜ್ ಫಿಲ್ಮ್ಸ್ ಐತಿಹಾಸಿಕ ಚಿತ್ರದ ಶೀರ್ಷಿಕೆಯು ಕೊನೆಯ ಹಿಂದೂ ಚಕ್ರವರ್ತಿ ಪೃಥ್ವಿರಾಜ್ ಚೌಹಾಣ್ ಅವರ ಹಿರಿಮೆಯನ್ನು ಪ್ರತಿಬಿಂಬಿಸುವಂತಿರಬೇಕೆಂದು ಬಯಸಿದ್ದೇವೆ. ಆದರೆ, ಕೇವಲ 'ಪೃಥ್ವಿರಾಜ್' ಎಂದು ಹೆಸರಿಟ್ಟಿರುವುದು 'ಆತನ ವೈಭವಕ್ಕೆ ಅನ್ಯಾಯ' ಮಾಡಿದಂತಾಗುತ್ತದೆ ಎಂದಿದ್ದ ಕರ್ಣಿ ಸೇನಾ, ಪ್ರತಿಭಟನೆಯ ಎಚ್ಚರಿಕೆ ನೀಡಿತ್ತು.

'ಕೊನೆಯ ಹಿಂದೂ ಚಕ್ರವರ್ತಿ ಮತ್ತು ಮಹಾನ್ ರಜಪೂತ ರಾಜನಾಗಿದ್ದ ಪೃಥ್ವಿರಾಜ್ ಚೌಹಾಣ್ ಅವರ ಮೇಲೆ ಚಿತ್ರ ನಿರ್ಮಾಪಕರು ಈ ಸಿನಿಮಾವನ್ನು ಮಾಡಿದ್ದಾರೆ. ಚಿತ್ರದ ಹೆಸರನ್ನು ಕೇವಲ ಪೃಥ್ವಿರಾಜ್ ಎಂದು ಹೇಗೆ ಇಡಬಹುದು? ಶೀರ್ಷಿಕೆಗೆ ಪೂರ್ಣ ಹೆಸರು ಇರಬೇಕು' ಎಂದು ಶ್ರೀ ರಜಪೂತ್ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಮಹಿಪಾಲ್ ಸಿಂಗ್ ಮಕ್ರಾನಾ ಆಗ್ರಹಿಸಿದ್ದರು.

ಓದಿ... ನಟಿ ಮೀರಾ ಜಾಸ್ಮಿನ್ ಗ್ಲಾಮರಸ್ ಫೋಟೊಶೂಟ್: ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ವೈರಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.