ಬುಧವಾರ, ಜೂನ್ 29, 2022
26 °C

ಯುವ ನಟಿಯೊಂದಿಗೆ ಮತ್ತೆ ಕಾಣಿಸಿಕೊಂಡ ಹೃತಿಕ್: ಅಭಿಮಾನಿಗಳಲ್ಲಿ ಹೆಚ್ಚಿತು ಕುತೂಹಲ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ನಟ ಹೃತಿಕ್​ ರೋಷನ್ ಅವರು ಯುವ ನಟಿ ಸಬಾ ಆಜಾದ್ ಅವರೊಂದಿಗೆ ಮತ್ತೆ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ಹೃತಿಕ್‌ ಅವರು ಸಬಾ ಅವರೊಂದಿಗೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈ ಬಗ್ಗೆ ಅವರು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

ಈ ಜೋಡಿ ಇತ್ತೀಚಿಗೆ ರೆಸ್ಟೋರೆಂಟ್‌ನಿಂದ ಒಟ್ಟಿಗೆ ಹೊರಬರುತ್ತಿರುವ ಫೋಟೊ ಮತ್ತು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿವೆ.

ರೆಸ್ಟೋರೆಂಟ್‌ನಿಂದ ಹೊರಬಂದ ಬಳಿಕ ಹೃತಿಕ್ ಹಾಗೂ ಸಬಾ ಒಟ್ಟಿಗೆ ಒಂದೇ ಕಾರಿನಲ್ಲಿ ತೆರಳುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಓದಿ...  ತುಂಬು ಗರ್ಭಿಣಿ ಅಮೂಲ್ಯ ಜತೆ ಶಿಲ್ಪಾ ಗಣೇಶ್: ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ವೈರಲ್
 

 2000ರಲ್ಲಿ ಹೃತಿಕ್​ ರೋಷನ್​ ಹಾಗೂ ಸುಸಾನೆ ಖಾನ್ ಮದುವೆ ಆಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ನಂತರ ಈ ಜೋಡಿ 2014ರಲ್ಲಿ ವಿಚ್ಛೇದನ ಪಡೆದಿದ್ದರು. ಆ ಬಳಿಕ ಇಬ್ಬರೂ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ಆದರೆ, ಇದೀಗ ಹೃತಿಕ್​ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವದಂತಿ  ಕೇಳಿಬರುತ್ತಿದೆ.

ವಿಚ್ಛೇದನ ಪಡೆದ ಬಳಿಕ ಸುಸಾನೆ ಖಾನ್ ಅವರೂ ಕೂಡ ಹಿಂದಿ ಕಿರುತೆರೆ ನಟ ಅರ್ಸ್ಲಾನ್ ಗೋನಿ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಮಾತುಗಳು ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿವೆ.

‘ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ರಹಸ್ಯವಾಗಿ ಇಡಲು ಆದ್ಯತೆ ನೀಡುವ ಹೃತಿಕ್​ ರೋಷನ್​, ಸದ್ಯ ಸಬಾ ಆಜಾದ್ ಅವರ ಜತೆ ಸುತ್ತಾಡುತ್ತಿದ್ದಾರೆ. ಈ ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ’ ಎಂದು ಹೃತಿಕ್​ ಆಪ್ತ ಮೂಲಗಳು ತಿಳಿಸಿರುವುದಾಗಿ ‘ಬಾಲಿವುಡ್​ ಹಂಗಾಮ’ ವರದಿ ಮಾಡಿತ್ತು.

‘ವಿಕ್ರಮ್ ವೇದ’ ಹಿಂದಿ ರಿಮೇಕ್‌ ಸಿನಿಮಾದಲ್ಲಿ ಹೃತಿಕ್‌ ಕಾಣಿಸಿಕೊಳ್ಳಲಿದ್ದಾರೆ. ರಾಕೇಶ್ ರೋಷನ್ ನಿರ್ದೇಶನದ ‘ಕ್ರಿಶ್-4’ ಸಿನಿಮಾದ ಮೂಲಕ ಮತ್ತೆ ಸೂಪರ್ ಹೀರೊ ಆಗಿ ಮಿಂಚಲು ಹೃತಿಕ್ ರೋಷನ್ ಸಜ್ಜಾಗಿದ್ದಾರೆ.

ಓದಿ... ಯುವ ನಟಿಯೊಂದಿಗೆ ಹೃತಿಕ್​ ರೋಷನ್​ ಡೇಟಿಂಗ್? ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ವೈರಲ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು