ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಶೋಲೆ'ಯಲ್ಲಿ ನಟಿಸಿದ್ದ ಖ್ಯಾತ ನಟ ಜಗದೀಪ್‌ ಇನ್ನಿಲ್ಲ

Last Updated 9 ಜುಲೈ 2020, 2:16 IST
ಅಕ್ಷರ ಗಾತ್ರ

ಮುಂಬೈ: ಖ್ಯಾತ ಹಾಸ್ಯನಟ ಜಗದೀಪ್‌ (81) ಅವರು ಬುಧವಾರ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರು ‘ಶೋಲೆ’ ಚಿತ್ರದಲ್ಲಿ ‘ಸೂರ್ಮ ಭೊಪಾಲಿ’ ಪಾತ್ರದಲ್ಲಿ ನಟಿಸಿ ಗಮನಸೆಳೆದಿದ್ದರು. 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದರು. ಅವರಿಗೆ ಇಬ್ಬರು ಪುತ್ರರಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸೈಯದ್‌ ಇಷ್ತಿಕ್‌ ಅಹಮದ್‌ ಜಫ್ರಿ (ಜಗದೀಪ್‌) ಅವರು ಬುಧವಾರ ರಾತ್ರಿ ನಿಧನರಾದರು ಎಂದು ಜಗದೀಪ್‌ ಕುಟುಂಬದ ಸ್ನೇಹಿತರಾದ ನಿರ್ಮಾಪಕ ಮೆಹ್ಮೂದ್‌ ಅಲಿ ತಿಳಿಸಿದರು.

ಬಿ.ಆರ್.ಛೋಪ್ರಾ ಅವರ 'ಅಫ್ಸಾನಾ' ಚಿತ್ರದಲ್ಲಿ ಬಾಲನಟರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಕೆ.ಎ.ಅಬ್ಬಾಸ್ ಅವರ 'ಮುನ್ನಾ', ಗುರು ದತ್ ಅವರ 'ಆರ್ ‌ಪಾರ್', ಬಿಮಲ್ ರಾಯ್ ಅವರ 'ದೊ ಬಿಘಾ ಜಮೀನ್' ಚಿತ್ರಗಳಲ್ಲಿ ನಟಿಸಿದ್ದರು.

'ಹಮ್ ಪಂಚಿ ಏಕ್ ದಾಲ್ ಕೆ' ಚಿತ್ರದ ಅಭಿನಯಕ್ಕಾಗಿ ಜಗದೀಪ್ ಅವರಿಗೆ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರು ಒಂದು ಬೇಟನ್ ಕೊಡುಗೆ ನೀಡಿದ್ದರು. 'ಪುರಾನಾ ಮಂದಿರ್' ಸೇರಿದಂತೆ ರಾಮ್‌ಸೆ ಸೋದರರ ಹಲವು ಚಿತ್ರಗಳಲ್ಲಿ ಜಗದೀಪ್ ಅಭಿನಯಿಸಿದ್ದರು.

1975ರಲ್ಲಿ ತೆರೆಕಂಡ ಬಹುತಾರಾಗಣದ 'ಶೋಲೇ' ಚಿತ್ರದ ಸೂರ್ಮ ಭೊಪಾಲಿ ಪಾತ್ರ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಇದರಿಂದ ಪ್ರೇರಿತರಾದ ಅವರು 'ಸೂರ್ಮ ಭೊಪಾಲಿ' ಹೆಸರಿನ ಚಿತ್ರವೊಂದನ್ನು ನಿರ್ಮಿಸಿದರು. ಆದರೆ ಅದು ಗಲ್ಲಾ ಪೆಟ್ಟಿಗೆಯಲ್ಲಿ ಅಂಥ ಯಶಸ್ಸು ದಕ್ಕಿಸಿಕೊಳ್ಳಲಿಲ್ಲ.

ಸುಮಾರು 60 ವರ್ಷ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದ ಜಗದೀಪ್ ಹಲವು ಹಿರಿಯ ನಟರು, ನಿರ್ದೇಶಕರು ಮತ್ತು ನಿರ್ಮಾಪಕರೊಂದಿಗೆ ಕೆಲಸ ಮಾಡಿದ್ದಾರೆ. 70 ಮತ್ತು 80ರ ದಶಕಗಳಲ್ಲಿಅವರ ವೃತ್ತಿ ಜೀವನಉನ್ನತ ಸ್ತರದಲ್ಲಿತ್ತು.

'ಬ್ರಹ್ಮಚಾರಿ' ಮತ್ತು 'ಆಂದಾಜ್ ಅಪ್ನಾ ಅಪ್ನಾ' ಜಗದೀಪ್ ಅವರ ಇತರ ಕೆಲ ಮುಖ್ಯ ಸಿನಿಮಾಗಳು. ಮಕ್ಕಳಾದ ಜಾವೇದ್ ಜಫ್ರಿ ಮತ್ತು ನವೇದ್ ಜಫ್ರಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT