ಮಂಗಳವಾರ, ಮೇ 18, 2021
30 °C

ಆತ್ಮಕಥೆ ಬರೆಯುತ್ತಾರಂತೆ ಬಾಲಿವುಡ್‌ ನಟ ಸೈಫ್‌ ಅಲಿ ಖಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರ ಬೆಳ್ಳಿ ಬದುಕಿಗೆ ಎರಡೂವರೆ ದಶಕಗಳು ತುಂಬಿವೆ. ಅವರು ಹಲವು ಭಿನ್ನ ಬಗೆಯ ಪಾತ್ರಗಳ ಮೂಲಕ ಸಿನಿಪ್ರಿಯರ ಮನಸೂರೆಗೊಂಡಿದ್ದಾರೆ. ಬಾಕ್ಸ್‌ಆಫೀಸ್‌ನಲ್ಲಿ ಸೂಪರ್‌ ಹಿಟ್‌ ಆದ ‘ತಾನಾಜಿ’ ಚಿತ್ರದಲ್ಲೂ ಅವರು ನಟಿಸಿದ್ದರು. ಇತ್ತೀಚೆಗೆ ತಮ್ಮ ಕುಟುಂಬಕ್ಕೆ ಮತ್ತೊಬ್ಬ ಸದಸ್ಯ ಸೇರ್ಪಡೆಯಾಗುತ್ತಿರುವುದು ಖುಷಿ ತಂದಿದೆ ಎಂದು ಸೈಫ್‌ ಮತ್ತು ಕರೀನಾ ಕಪೂರ್‌ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಎರಡನೇ ಮಗುವಿನ ಆಗಮನದ ಬಗ್ಗೆ ಬಹಿರಂಗಪಡಿಸಿದ್ದು ದೊಡ್ಡ ಸುದ್ದಿಯಾಗಿತ್ತು.

ಓಂ ರಾವುತ್‌ ನಿರ್ದೇಶನದ ‘ಆದಿಪುರುಷ್‌’ ಚಿತ್ರದಲ್ಲಿ ಸೈಫ್‌ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಇದೆ. ಈ ನಡುವೆಯೇ ‌ಈಗ ಆತ್ಮಕಥೆ ಬರೆಯಲು ಸೈಫ್‌ ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿ ಬಿಟೌನ್‌ ಅಂಗಳದಿಂದ ಹೊರಬಿದ್ದಿದೆ. 

‘ನಮ್ಮ ಬದುಕಿನ ಬದಲಾವಣೆಗೆ ಸಾಕಷ್ಟು ವಿಷಯಗಳು ಕಾರಣವಾಗುತ್ತವೆ. ಆದರೆ, ಅವುಗಳನ್ನು ನಾವು ದಾಖಲಿಸುವುದಿಲ್ಲ. ಅವುಗಳನ್ನು ಮತ್ತೊಮ್ಮೆ ಹಿಂದಿರುಗಿ ನೋಡಿದರೆ ಖುಷಿಯಾಗುತ್ತದೆ. ಜೊತೆಗೆ, ಅಂತಹ ಸಂತಸದ ವಿಷಯಗಳನ್ನು ದಾಖಲಿಸಬೇಕಾಗುತ್ತದೆ. ನನ್ನ ಜೀವನ ಕುರಿತು ನಾನು ಬರೆಯುವ ಪುಸ್ತಕ ಎಲ್ಲರಿಗೂ ಇಷ್ಟವಾಗಲಿದೆ’ ಎಂದು ಸೈಫ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೈಫ್‌ ಅಲಿ ಖಾನ್‌ ಅವರ ಬದುಕು ಸಾಕಷ್ಟು ಏರಿಳಿತಗಳನ್ನು ಕಂಡಿವೆ. ಅವರ ವೈಯಕ್ತಿಕ ಬದುಕು ಕೂಡ ಆಸಕ್ತಿಕರವಾಗಿದೆ. ಹಾಗಾಗಿ, ಅವರು ಬರೆಯಲಿರುವ ಆತ್ಮಕಥೆ ಜನರ ಗಮನ ಸೆಳೆಯಲಿದೆ ಎಂಬುದು ಅವರ ಅಭಿಮಾನಿಗಳ ಲೆಕ್ಕಾಚಾರ. 

ತನ್ನ ಕುಟುಂಬ, ಮನೆ, ವೃತ್ತಿಬದುಕಿನ ಯಶಸ್ಸು ಮತ್ತು ಸೋಲು, ಅವರ ಬದುಕಿಗೆ ಪ್ರೇರಣೆಯಾದ ಅಂಶಗಳ ಬಗ್ಗೆ ಈ ಪುಸ್ತಕದಲ್ಲಿ ದಾಖಲಿಸುವ ನಿರೀಕ್ಷೆಯಿದೆ. ಹಾರ್ಪರ್‌ ಕಾಲಿನ್ಸ್ ಇಂಡಿಯಾ ಇದರ ಮುದ್ರಣದ ಹೊಣೆ ಹೊತ್ತಿದೆ. 2021ಕ್ಕೆ ಇದು ಬಿಡುಗಡೆಯಾಗಲಿದೆ.

ಪ್ರಸ್ತುತ ಸೈಫ್‌ ‘ಬಂಟಿ ಹೌರ್‌ ಬಬ್ಲಿ 2’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೋವಿಡ್–‌ 19 ಪರಿಣಾಮ ಇದರ ಶೂಟಿಂಗ್‌ ಸ್ಥಗಿತಗೊಂಡಿದೆ. ಇತ್ತೀಚೆಗೆ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ತನ್ನ ಆತ್ಮಕಥೆಯಾದ ‘ಅನ್‌ಫಿನಿಷ್ಡ್‌’ ಅನ್ನು ಪೂರ್ಣಗೊಳಿಸಿದ್ದರು. ಈಗ ಸೈಫ್‌ ತನ್ನ ಆತ್ಮಕಥೆಯಲ್ಲಿ ಏನೆಲ್ಲಾ ವಿಷಯಗಳನ್ನು ಬರೆಯಲಿದ್ದಾರೆ ಎಂಬ ಕುತೂಹಲ ಬಾಲಿವುಡ್‌ ಮತ್ತು ಅಭಿಮಾನಿಗಳದ್ದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು