ಶನಿವಾರ, ಅಕ್ಟೋಬರ್ 16, 2021
22 °C

ಮಾಲ್ಡೀವ್ಸ್ ಪ್ರವಾಸದಲ್ಲಿ ಬಾಲಿವುಡ್ ಬೆಡಗಿ ಅಲಾಯ ಎಫ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Alaya F iNSTAGRAM Post

ಬೆಂಗಳೂರು: ಬಾಲಿವುಡ್ ನಟಿಯರು ಅತಿ ಹೆಚ್ಚು ಬಾರಿ ಪ್ರವಾಸ ಹೋಗುವ ತಾಣವೆಂದರೆ ಅದು ಮಾಲ್ಡೀವ್ಸ್.. ಅದರಲ್ಲೂ ಲಾಕ್‌ಡೌನ್ ತೆರವಿನ ಬಳಿಕ ಪ್ರವಾಸ ಹೋಗುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಬಾರಿ ನಟಿ ಅಲಾಯ ಫರ್ನಿಚರ್‌ವಾಲಾ ಮಾಲ್ಡೀವ್ಸ್‌ಗೆ ತೆರಳಿದ್ದಾರೆ.

ಅಲಾಯ ತಮ್ಮ ಪ್ರವಾಸದ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲೂ ವಿಶೇಷವೇನೆಂದರೆ ಈಜುಕೊಳದಲ್ಲಿಯೇ ಕುಳಿತು ಬೆಳಗಿನ ತಿಂಡಿ ಮುಗಿಸಿದ್ದಾರೆ!

ಫ್ರೆಡ್ಡಿ ಚಿತ್ರದ ಶೂಟಿಂಗ್ ಮುಗಿದ ಬಳಿಕ ನಟಿ ಅಲಾಯ ಎಫ್., ಮಾಲ್ಡೀವ್ಸ್‌ಗೆ ತೆರಳಿದ್ದಾರೆ.

ಫ್ರೆಡ್ಡಿ ಚಿತ್ರೀಕರಣ ಮುಗಿಯುವುದನ್ನೇ ಕಾಯುತ್ತಿದ್ದ ಅಲಾಯ, ಪ್ರವಾಸ ತೆರಳಿದ್ದು, ಅಲ್ಲಿ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದೇನೆ ಎಂದಿದ್ದಾರೆ. ಅಲ್ಲದೆ, ಅಭಿಮಾನಿಗಳಿಗಾಗಿ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದು, ನಾನಿಲ್ಲಿ ತುಂಬಾ ಖುಷಿಯಾಗಿದ್ದೇನೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು