ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೋಬ್ಬರಿ 20 ಕೆ.ಜಿ ತೂಕ ಇಳಿಸಿಕೊಂಡ ಬಾಲಿವುಡ್ ನಟಿ ಸೋನಮ್ ಕಪೂರ್!

ಮಗು ಜನನದ ನಂತರ ತೂಕ ಹೆಚ್ಚಳದಿಂದ ಬಳಲಿದ್ದ ನಟಿ ಸೋನಮ್
Published 17 ಜನವರಿ 2024, 12:56 IST
Last Updated 17 ಜನವರಿ 2024, 12:56 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್ ನಟಿ ಸೋನಮ್ ಕಪೂರ್ ಅವರು ಬರೋಬ್ಬರಿ 20 ಕೆ.ಜಿ ತೂಕ ಇಳಿಸಿಕೊಂಡು ಗಮನ ಸೆಳೆದಿದ್ದಾರೆ.

ಈ ಕುರಿತು ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿದ್ದು, “What a wow...20 kgs down...6 more to go‘‘ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನೂ 6 ಕೆ.ಜಿ ತೂಕ ಇಳಿಸಿಕೊಳ್ಳುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

2018 ರಲ್ಲಿ ಸೋನಮ್ ಕಪೂರ್ ಆನಂದ್ ಅಹುಜಾ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ 2022 ಆಗಸ್ಟ್‌ 20 ರಂದು ಗಂಡು ಮಗು ಜನಿಸಿತ್ತು.

ಮಗು ಜನನದ ನಂತರ ತೂಕ ಹೆಚ್ಚಳದಿಂದ ಬಳಲಿದ್ದ ನಟಿ, ಇದೀಗ ಗಮನಾರ್ಹವಾಗಿ ತೂಕ ಇಳಿಸಿಕೊಂಡಿದ್ದಾರೆ.

ಸೋನಮ್ ಕಪೂರ್

ಸೋನಮ್ ಕಪೂರ್

‘ಇದಕ್ಕಾಗಿ ನಾನು 16 ತಿಂಗಳು ತೆಗೆದುಕೊಂಡೆ. ಯಾವುದೇ ಅನಾಹುತಕಾರಿ ಡಯಟ್ ಮಾಡದೇ, ಹುಚ್ಚು ವ್ಯಾಯಾಮಗಳು ಇಲ್ಲದೇ ಕೇವಲ ಶಿಸ್ತಿನ ಡಯಟ್ ಹಾಗೂ ನಿಗದಿತ ವ್ಯಾಯಾಮ, ಯೋಗದ ಮೂಲಕ ಇದನ್ನು ಸಾಧಿಸಿದೆ. ಈಗ ನಾನು ಮೊದಲಿನಂತೆ ಕಾಣುತ್ತಿದ್ದೇನೆ’ ಎಂದು ಕೆಲ ಫೋಟೊಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

2020 ರಲ್ಲಿ ‘AK vs AK’ ಸಿನಿಮಾದ ನಂತರ ಚಿತ್ರರಂಗದಿಂದ ದೂರವಿದ್ದ ಸೋನಮ್, 2023 ರಲ್ಲಿ ಅವರ ‘Blind’ ಎಂಬ ಒಂದೇ ಚಿತ್ರ ತೆರೆ ಕಂಡಿತ್ತು. ಸದ್ಯ ಅವರ ಯಾವುದೇ ಚಿತ್ರಗಳು ಘೋಷಣೆಯಾಗಿಲ್ಲ. ತೂಕ ಇಳಿಕೆಯೊಂದಿಗೆ ಅವರು ಮತ್ತೆ ಬಾಲಿವುಡ್‌ನಲ್ಲಿ ಮಿಂಚುವ ಕನಸು ಕಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT