ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರಿ ಪಂಡಿತರ ನೋವು ನನಗೆ ಗೊತ್ತಿದೆ, ಚಿತ್ರ ನೋಡಿ: ಯಾಮಿ ಗೌತಮ್

Last Updated 15 ಮಾರ್ಚ್ 2022, 10:55 IST
ಅಕ್ಷರ ಗಾತ್ರ

ಬೆಂಗಳೂರು: ನಾನು ಮದುವೆಯಾಗಿರುವುದು ಕಾಶ್ಮೀರಿ ಪಂಡಿತ್ ಕುಟುಂಬದವರನ್ನು.. ಹೀಗಾಗಿ ಅವರು ಅನುಭವಿಸಿದ ನೋವು ನನಗೆ ಚೆನ್ನಾಗಿ ಗೊತ್ತಿದೆ. ಅಂದು ಏನಾಯಿತು ಎನ್ನುವ ಬಗ್ಗೆ ತಿಳಿದುಕೊಳ್ಳಲು, ದಯವಿಟ್ಟು ಎಲ್ಲರೂ 'ದಿ ಕಾಶ್ಮೀರ್‌ ಫೈಲ್ಸ್' ಸಿನಿಮಾ ನೋಡಿ ಎಂದು ನಟಿ ಯಾಮಿ ಗೌತಮ್ ಹೇಳಿದ್ದಾರೆ.

ಯಾಮಿ ಗೌತಮ್ ಮತ್ತು ಅವರ ಪತಿ ಆದಿತ್ಯ ಧಾರ್, 'ದಿ ಕಾಶ್ಮೀರ್‌ ಫೈಲ್ಸ್' ಚಿತ್ರವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದು, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರನ್ನು ಅಭಿನಂದಿಸಿದ್ದಾರೆ.

32 ವರ್ಷಗಳ ಬಳಿಕವಾದರೂ, ಕೊನೆಗೂ ಸತ್ಯವನ್ನು ಹೀಗೆ ಬಹಿರಂಗಪಡಿಸಲಾಯಿತು. ಕಾಶ್ಮೀರಿ ಪಂಡಿತರ ಕುಟುಂಬ ಅನುಭವಿಸಿದ ನೋವು, ದೌರ್ಜನ್ಯದ ಬಗ್ಗೆ ನಮಗೆ ತಿಳಿದಿರಬೇಕು ಎಂದು ಯಾಮಿ ಟ್ವೀಟ್ ಮಾಡಿದ್ದಾರೆ.

ಯಾಮಿ ಅವರ ಪತಿ ಆದಿತ್ಯ, ಕಾಶ್ಮೀರಿ ಪಂಡಿತರ ಕುಟುಂಬದವರಾಗಿದ್ದು, ಸಿನಿಮಾ ಕುರಿತು ಪ್ರಶಂಸೆಯ ಟ್ವೀಟ್ ಮಾಡಿದ್ದರು.

1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಮತ್ತು ಹತ್ಯಾಕಾಂಡದ ಕುರಿತು 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT