ನವದೆಹಲಿ: ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ನಟನೆಯ ಹಾರರ್– ಕ್ರೈಮ್ ಸಿನಿಮಾ ‘ಸ್ತ್ರೀ–2’ ಜಗತ್ತಿನಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ₹500 ಕೋಟಿ ಗಳಿಕೆ ಮಾಡಿದೆ ಎಂದು ನಿರ್ಮಾಪಕರು ಭಾನುವಾರ ತಿಳಿಸಿದ್ದಾರೆ.
ಅಮರ್ ಕೌಶಿಕ್ ನಿರ್ದೇಶನದ, ದಿನೇಶ್ ವಿಜಯನ್ ನಿರ್ಮಾಣದಲ್ಲಿ ಮದ್ದೋಕ್ ಫಿಲ್ಸ್ಮ ಬ್ಯಾನರ್‌ನಡಿ ನಿರ್ಮಾಣವಾದ ಹಿಂದಿ ಸಿನಿಮಾ ‘ಸ್ತ್ರೀ–2’, 2018ರಲ್ಲಿ ಬಿಡುಗಡೆಯಾದ ಸ್ತ್ರೀ ಸಿನಿಮಾದ ಸೀಕ್ವೆಲ್ ಆಗಿದೆ.
ಸಿನಿಮಾದ ಕಲೆಕ್ಷನ್ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡ ತಂಡ, ‘ಸತತ ಎರಡನೇ ಶನಿವಾರವೂ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರೋತ್ಸಾಹಿಸಿದಕ್ಕೆ ಧನ್ಯವಾದಗಳು, ಇಂದೇ ಟಿಕೆಟ್ ಕಾಯ್ದಿರಿಸಿ ತಪ್ಪದೇ ಸಿನಿಮಾ ವೀಕ್ಷಿಸಿ’ ಎಂದು ಬರೆದುಕೊಂಡಿದ್ದಾರೆ.
ಆಗಸ್ಟ್ 15 ರಂದು ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು.