ಶುಕ್ರವಾರ, ಮೇ 27, 2022
22 °C

ವಂಚನೆ ಪ್ರಕರಣ: ಬಾಲಿವುಡ್ ನಿರ್ಮಾಪಕ ಪರಾಗ್ ಸಾಂಘ್ವಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ವಂಚನೆ ಪ್ರಕರಣವೊಂದರಲ್ಲಿ ಬಾಲಿವುಡ್ ನಿರ್ಮಾಪಕ ಪರಾಗ್ ಸಾಂಘ್ವಿ ಅವರನ್ನ ಮುಂಬೈ ಪೊಲೀಸರು ಬಂಧಿಸಿದ್ದು, ಡಿಸೆಂಬರ್ 25ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

2018ರಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯು) ಅಲುಂಬ್ರಾ ಎಂಟರ್‌ಟೈನ್‌ಮೆಂಟ್ ಸಿಇಒ ಸಾಂಘ್ವಿಯನ್ನು ಬಂಧಿಸಿದೆ.

ಇಒಡಬ್ಲ್ಯುಗೆ ನೀಡಿದ ದೂರಿನ ಪ್ರಕಾರ, ನೊಂದ ವ್ಯಕ್ತಿ ಬಾಂದ್ರಾ ಪಶ್ಚಿಮದ ಪೋಷ್ ಟರ್ನರ್ ರಸ್ತೆಯಲ್ಲಿ ಮೂರು ಫ್ಲಾಟ್‌ಗಳನ್ನು ಹೊಂದಿದ್ದರು. ಈ ಪೈಕಿ ಒಂದನ್ನು ಸಾಂಘ್ವಿ ನಿರ್ದೇಶಕರಾಗಿದ್ದ ಕಂಪನಿಯೊಂದಕ್ಕೆ ಭೋಗ್ಯಕ್ಕೆ ನೀಡಲಾಗಿತ್ತು ಮತ್ತು ಇನ್ನೆರಡನ್ನು ಇತರರಿಗೆ ಭೋಗ್ಯಕ್ಕೆ ನೀಡಲಾಗಿತ್ತು.

ಬಳಿಕ, ಮೂರು ಫ್ಲಾಟ್‌ಗಳನ್ನು ಭೋಗ್ಯಕ್ಕೆ ಪಡೆದುಕೊಂಡಿದ್ದವರು ಮಾರಿದ್ದಾರೆ. ಹೀಗಾಗಿ ತನಗೆ ವಂಚನೆಯಾಗಿದೆ ಎಂದು ಆತ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ 2018ರಲ್ಲಿ ಎಫ್ಐಆರ್ ದಾಖಲಿಸಿದ್ದ ಇಒಡಬ್ಲ್ಯು, ಸಾಂಘ್ವಿಯನ್ನು ಮಂಗಳವಾರ ಬಂಧಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು