ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಕ್ಕಳಾ ಚೆಲುವೆ ಸೊನಾಲಿ

Published 22 ಜೂನ್ 2024, 5:47 IST
Last Updated 22 ಜೂನ್ 2024, 5:47 IST
ಅಕ್ಷರ ಗಾತ್ರ

ನಿಮ್ಮನ್ನ ಭೇಟಿಯಾಗಲಿಲ್ಲ ಅಂತ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರಂತೆ... ಎಂಬ ಸಂದರ್ಶಕರ ಪ್ರಶ್ನೆಗೆ; ಹೌದಾ.. ಹೀಗೆಲ್ಲ ಮಾಡ್ತಾರಾ.. ರಕ್ತದಿಂದ ಬರೆದ ಪ್ರೇಮಪತ್ರಗಳು ಬರುತ್ತಿದ್ದವು. ಆದರೆ ಅದು ನಿಜವಾಗಿಯೂ ರಕ್ತದಿಂದ ಬರೀತಿದ್ರಾ? ಅದ್ಹೇಗೆ ಬರೀತಿದ್ರು ಎಂದೆಲ್ಲ ಸೋಜಿಗ ಪಡುತ್ತಿದ್ದೆ ಎಂದು ಸೊನಾಲಿ ಬೇಂದ್ರೆ ಪ್ರತಿಕ್ರಿಯಿಸಿದ್ದಾರೆ.

ಜೀ5 ಒಟಿಟಿಗಾಗಿ ದ ಬ್ರೋಕನ್‌ ನ್ಯೂಸ್‌ ವೆಬ್‌ಸಿರೀಸ್‌ನಲ್ಲಿ ನಟಿಸುತ್ತಿರುವ ಸೊನಾಲಿ ಈಚೆಗೆ ಸಾಮಾಜಿಕ ಜಾಲತಾಣಗಳ ವೇದಿಕೆಯ ಸಂದರ್ಶನದಲ್ಲಿ ಅಭಿಮಾನಿಗಳ ಹುಚ್ಚುಪ್ರೀತಿಯ ಕುರಿತು ಮನ ಬಿಚ್ಚಿ ಹರಟಿದ್ದಾರೆ. 

ವಿಪರೀತ ಹುಚ್ಚುತನ ಇರುವ ಅಭಿಮಾನಿಗಳನ್ನು ನೋಡಿದ್ದೇನೆ. ಆದರೆ ಹೀಗೆ ಪ್ರಾಣ ಕಳೆದುಕೊಂಡವರ ಬಗ್ಗೆ ಗೊತ್ತಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ, ಪಾಕಿಸ್ತಾನದ ಕ್ರಿಕೆಟ್‌ ಪಟು ಶೋಯೆಬ್‌ ಅಖ್ತರ್‌ ತಾವು ಸೊನಾಲಿ ಬೇಂದ್ರೆಯ ಅಭಿಮಾನಿಯೆಂದೂ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಸೊನಾಲಿ ಬೇಂದ್ರೆ ಮದುವೆಗೆ ಒಪ್ಪದಿದ್ದಲ್ಲಿ ಅಪಹರಿಸುವುದಾಗಿ ಹೇಳಿಕೆ ನೀಡಿದ್ದರು, ಎಂದು ಮಾಧ್ಯಮವು ಸೊನಾಲಿ ಅವರನ್ನು ನೆನಪಿಸಿದಾಗ.. ಹೌದಾ.. ಹಾಗೆಲ್ಲ ಆಗಿತ್ತಾ? ನನಗಿದು ನೆನಪಿಲ್ಲ ಎಂದು ನಿರಾಕರಿಸಿದ್ದಾರೆ.

ಶೊಯೆಬ್‌ ಅಕ್ತರ್‌, ತಮಗೆ ಸೊನಾಲಿಬೇಂದ್ರೆ ಅವರನ್ನು ಕಂಡರೆ ಇಷ್ಟವೆಂದೂ, ಅವರು ಕ್ರಶ್‌ ಎಂದೂ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಇದು ಆಗ ಆ ಕಾಲದಲ್ಲಿ ಸುದ್ದಿಯಾಗಿತ್ತು ಎಂಬುದನ್ನು ನೆನಪಿಸಿದಾಗಲೂ ಸೊನಾಲಿ ಬೇಂದ್ರೆ ನಗುವರಳಿಸಿ ಪ್ರತಿಕ್ರಿಯಿಸಿದರಂತೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT