ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

56ನೇ ಹುಟ್ಟುಹಬ್ಬದ ಸಂಭ್ರಮ: ನಟ ಅಕ್ಷಯ್‌ ಕುಮಾರ್‌ ಹೊಸ ಸಿನಿಮಾ ಘೋಷಣೆ

Published 9 ಸೆಪ್ಟೆಂಬರ್ 2023, 14:29 IST
Last Updated 9 ಸೆಪ್ಟೆಂಬರ್ 2023, 14:29 IST
ಅಕ್ಷರ ಗಾತ್ರ

ಮುಂಬೈ: 56ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೊಸ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

‘ಇಂದು ನನಗೆ ಹಾಗೂ ನಿಮಗೆಲ್ಲರಿಗಾಗಿ ಹುಟ್ಟುಹಬ್ಬದ ಉಡುಗೊರೆ ನೀಡಿದ್ದೇನೆ. ಇಷ್ಟಪಟ್ಟರೆ ಥಾಂಕ್ಸ್ ಹೇಳಿ. ವೆಲ್‌ಕಮ್ ಟು ಜಂಗಲ್ (ವೆಲ್ಕಕಮ್ 3)’ ಎಂದು ನಟ ಅಕ್ಷಯ್‌ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ವೆಲ್‌ಕಮ್‌ ಟು ದಿ ಜಂಗಲ್‌ ಎಂಬ ಶೀರ್ಷಿಕೆ ಹೊಂದಿರುವ ಈ ಚಿತ್ರದಲ್ಲಿ ಸಂಜಯ್‌ ದತ್‌, ಸುನೀಲ್‌ ಶೆಟ್ಟಿ, ರವೀನಾ ಟಂಡನ್‌, ಜಾನಿ ಲಿವರ್‌, ಪರೇಶ್‌ ರಾವಲ್‌, ಲಾರಾ ದತ್ತಾ, ಜಾಕ್ವೆಲಿನ್‌ ಫರ್ನಾಂಡೀಸ್‌, ತುಷಾರ್‌ ಕಪೂರ್‌, ದಿಶಾ ಪಟಾನಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಜಿಯೋ ಸ್ಟುಡಿಯೋಸ್‌ ಎಎ ನಾಡಿಯಾಡ್ವಾಲಾ ಸಹಯೋಗದೊಂದಿಗೆ ಪ್ರಸ್ತುತಪಡಿಸಿರುವ ಈ ಚಿತ್ರವನ್ನು ಜ್ಯೋತಿ ದೇಶಪಾಂಡೆ ಮತ್ತು ಫಿರೋಜ್‌ ಎ. ನಾಡಿಯಾಡ್ವಾಲಾ ನಿರ್ಮಾಣ ಮಾಡಿದ್ದಾರೆ.

ಅಹ್ಮದ್ ಖಾನ್ ನಿರ್ದೇಶನದ ಚಿತ್ರವು 2024ರ ಡಿಸೆಂಬರ್‌ 20ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

2007ರಲ್ಲಿ ಬಿಡುಗಡೆಯಾದ ಫ್ರ್ಯಾಂಚೈಸ್‌ನ ಮೊದಲ ಚಿತ್ರ ‘ವೆಲ್‌ಕಮ್‌’ ಹಾಗೂ 2015ರಲ್ಲಿ ಬಿಡುಗಡೆಗೊಂಡ ಎರಡನೇ ಚಿತ್ರ ‘ವೆಲ್‌ಕಮ್‌ ಬ್ಯಾಕ್‌’ ಎರಡೂ ಚಲನಚಿತ್ರಗಳನ್ನು ಅನೀಸ್‌ ಬಾಜ್ಮಿ ನಿರ್ದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT