ಚಿತ್ರ ನಿರ್ಮಾಪಕ ಬೆಂಕೊಶ್ರೀ (ಬಿ.ಕೆ. ಶ್ರೀನಿವಾಸ್) ಅವರ ಪುತ್ರ ಅಕ್ಷರ್ ಅವರು ಹೊಸ ಆಲೋಚನೆಯೊಂದಿಗೆ ಸಿನಿಮಾ ಪ್ರೇಮಿಗಳ ಎದುರು ಬಂದಿದ್ದಾರೆ. ಕನ್ನಡದ ಮಟ್ಟಿಗೆ ತುಸು ಅಪರಿಚಿತ ಎನ್ನಬಹುದಾದ ಕ್ಯಾಲೆಂಡರ್ ಒಂದನ್ನು ಅವರು ಈ ವಾರ ಬಿಡುಗಡೆ ಮಾಡಿದ್ದಾರೆ. ಸಿನಿಮಾ, ಕ್ಯಾಲೆಂಡರ್, ಹೊಸ ಆಲೋಚನೆ...? ಇವೆಲ್ಲ ಏನು ಎಂಬ ಪ್ರಶ್ನೆ ಸಹಜ.

ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮಕ್ಕೆ ಅಕ್ಷರ್ ಅವರು ಸುದ್ದಿಗಾರರನ್ನು ಆಹ್ವಾನಿಸಿದ್ದರು. ‘ಏನಿದು ಕ್ಯಾಲೆಂಡರ್, ಇದಕ್ಕೂ ಸಿನಿಮಾ ಲೋಕಕ್ಕೂ ಏನು ಸಂಬಂಧ’ ಎಂಬ ಪ್ರಶ್ನೆ ಅಕ್ಷರ ಅವರಿಗೆ ಎದುರಾಯಿತು. ಅವರು ಇದಕ್ಕೆ ಸ್ಮಾರ್ಟ್ಫೋನನ್ನು ಉದಾಹರಣೆಯಾಗಿ ನೀಡುವ ಮೂಲಕ ಉತ್ತರಿಸಿದರು. ‘ಹೊಸ ಫೋನ್ ಬಂದಾಗ ಅದರ ವೈಶಿಷ್ಟ್ಯಗಳು ಏನೇನು, ಆ ಫೋನ್ ಬಳಸಿ ಏನೇನು ಮಾಡಬಹುದು ಎಂಬುದನ್ನೆಲ್ಲ ಹೇಳುವುದು ಸಹಜ. ಅದೇ ರೀತಿ ನಟನೊಬ್ಬ ತಾನು ಯಾವೆಲ್ಲ ಪಾತ್ರಗಳನ್ನು ನಿಭಾಯಿಸಬಲ್ಲೆ ಎಂಬುದನ್ನು ಈ ಕ್ಯಾಲೆಂಡರ್ ಮೂಲಕ ಹೇಳುವುದು ಹೊಸ ಪರಿಕಲ್ಪನೆ’ ಎಂದರು ಅಕ್ಷರ್.

ಕ್ಯಾಲೆಂಡರ್ ಮೂಲಕ ಅಕ್ಷರ್ ಅವರು ತಾವು ಲವರ್ ಬಾಯ್ ಆಗಿ, ಯಶಸ್ವಿ ಪುರುಷನಾಗಿ, ದಾರಿ ತಪ್ಪಿದ ಯುವಕನಾಗಿ... ಹೀಗೆ ಹತ್ತು ಹಲವು ಪಾತ್ರಗಳನ್ನು ನಿಭಾಯಿಸಬಲ್ಲೆ ಎಂಬುದನ್ನು ತೋರಿಸಿಕೊಡಲು ಮುಂದಾಗಿದ್ದಾರೆ. ಅಂದಹಾಗೆ, ಈ ಕ್ಯಾಲೆಂಡರ್ ಮೂಲಕ ಅಕ್ಷರ್ ಅವರು ಕಾಣಿಸಿಕೊಂಡಿರುವ ಅವತಾರಗಳಿಗೂ, ಅವರ ಮುಂಬರುವ ಸಿನಿಮಾ ಕಥೆಗಳಿಗೂ ಯಾವ ಸಂಬಂಧವೂ ಇಲ್ಲ ಎಂಬುದು ಸ್ಪಷ್ಟ.

ಕ್ಯಾಲೆಂಡರ್ ಬಿಡುಗಡೆ ಮಾಡಿ ಅಕ್ಷರ ಅವರಿಗೆ ಶುಭ ಹಾರೈಸಲು ನಿರ್ದೇಶಕರಾದ ಸಿಂಪಲ್ ಸುನಿ ಮತ್ತು ಡಿ. ಸತ್ಯಪ್ರಕಾಶ್ ಬಂದಿದ್ದರು. ಅಕ್ಷರ್ ಅವರ ಮುಂದಿನ ಸಿನಿಮಾ ನಿರ್ದೇಶನದ ಹೊಣೆ ಹೊರಲಿದ್ದಾರೆಯೇ ಎಂಬ ಕುತೂಹಲವನ್ನೂ ಮೂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.