ಸೋಮವಾರ, ಸೆಪ್ಟೆಂಬರ್ 21, 2020
22 °C

ಗಾಂಜಾವನ್ನು ತುಳಸಿಗೆ ಹೋಲಿಸಿದ ನಟಿ ನಿವೇದಿತಾ ವಿರುದ್ಧ ಎಫ್‌ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾದಕ ವಸ್ತುವಾದ ಗಾಂಜಾವನ್ನು ತುಳಸಿಗೆ ಹೋಲಿಸಿ ಮಾತನಾಡಿದ್ದಾರೆ ಎನ್ನಲಾದ ನಟಿ ನಿವೇದಿತಾ ವಿರುದ್ಧ ಮಲ್ಲೇಶ್ವರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

‘ಗಾಂಜಾ ಔಷಧಿ ಗುಣವುಳ್ಳ ಸಸಿ. ತುಳಸಿ ತರವೇ ಅದನ್ನು ಬಳಕೆ ಮಾಡಬೇಕು‘ ಎಂಬುದಾಗಿ ನಟಿ ನಿವೇದಿತಾ ಹೇಳಿಕೆ ನೀಡಿದ್ದರು.

ಇಂಥ ಹೇಳಿಕೆಯಿಂದ ಗಾಂಜಾ ಸೇವನೆಗೆ ಪ್ರಚೋದನೆ ನೀಡಿದ ಆರೋಪದಡಿ ನಿವೇದಿತಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಎ. ದೀಪಕ್ ಎಂಬುವರು ದೂರು ನೀಡಿದ್ದರು.

‘ತುಳಸಿಯನ್ನು ಗಾಂಜಾ ಗಿಡಕ್ಕೆ ಹೋಲಿಸಿರುವ ನಟಿ ನಿವೇದಿತಾ, ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ’ ಎಂದು ದೀಪಕ್ ದೂರಿನಲ್ಲಿ ಹೇಳಿದ್ದರು. ಅದನ್ನು ಆಧರಿಸಿಯೇ ಇದೀಗ ಎಫ್ಐಆರ್ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು