ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನುಷ್ ಜನ್ಮದಿನಕ್ಕೆ ‘ಕ್ಯಾಪ್ಟನ್ ಮಿಲ್ಲರ್’ ಟೀಸರ್‌ ಉಡುಗೊರೆ: ಅಭಿಮಾನಿಗಳು ಖುಷ್‌

Published 28 ಜುಲೈ 2023, 4:12 IST
Last Updated 28 ಜುಲೈ 2023, 4:12 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳು ನಟ ಧನುಷ್ ಅವರಿಗೆ ಇಂದು (ಜುಲೈ 28) ಜನ್ಮದಿನದ ಸಂಭ್ರಮ. ಸಿನಿಮಾರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ನಟನಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ.

 ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಚಿತ್ರತಂಡ ಧನುಷ್‌ ಹುಟ್ಟುಹಬ್ಬದ ಪ್ರಯುಕ್ತ ಟೀಸರ್‌ ಬಿಡುಗಡೆ ಮಾಡಿದ್ದು ಅಭಿಮಾನಿಗಳಿಗೆ ಸಖತ್‌ ಖುಷಿ ಕೊಟ್ಟಿದೆ. ಈ ಟೀಸರ್‌ ನೋಡಿರುವ ಅಭಿಮಾನಿಗಳು ಮತ್ತು ಸಿನಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ಪೂರ್ವದ ಕಥೆಯನ್ನು ಹೊಂದಿರುವ ಈ ಚಿತ್ರದ ಟೀಸರ್ ಸಾಕಷ್ಟು ರೋಚಕವಾಗಿ ಮೂಡಿ ಬಂದಿದೆ. ಬ್ರಿಟಿಷರ ವಿರುದ್ಧ ಹೋರಾಡುವ ವ್ಯಕ್ತಿಯಾಗಿ ಧನುಷ್ ಕಾಣಿಸಿಕೊಂಡಿದ್ದಾರೆ. ಅವರ ರಗಡ್‌ ಲುಕ್‌ ಅಭಿಮಾನಿಗಳಿಗೆ ಆಪ್ತವಾಗಿದೆ. ಈ ಚಿತ್ರದಲ್ಲಿ ಚಂದನವನದ ಸೆಂಚುರಿ ಸ್ಟಾರ್ ಶಿವರಾಜ್‌ ಕುಮಾರ್‌ ಸಹ ಅಭಿನಯಿಸಿದ್ದಾರೆ. 

ಟೀಸರ್‌ನಲ್ಲಿ ಶಿವರಾಜ್‌ ಕುಮಾರ್‌ ಕುದುರೆ ಏರಿ ಮಾಸ್ ಆಗಿ ಎಂಟ್ರಿ ಕೊಟ್ಟಿರುವುದು ಶಿವಣ್ಣ ಅಭಿಮಾನಿಗಳಿಗೆ ಸಖತ್‌ ಇಷ್ಟವಾಗಿದೆ. ಟೀಸರ್‌ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದೆ. ಸಾಮಾಜಿಕ ಮಾಧ್ಯಮಗಳಲ್ಲೂ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಟೀಸರ್‌ ಸದ್ದು ಮಾಡುತ್ತಿದೆ. 

ಅರುಣ್ ಮಾದೇಶ್ವರನ್ ಅವರು ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಜಿವಿ ಪ್ರಕಾಶ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಶಿವರಾಜ್​ಕುಮಾರ್, ಸಂದೀಪ್ ಕಿಶನ್, ಪ್ರಿಯಾಂಕಾ ಮೋಹನ್ ಸೇರಿದಂತೆ ಮೊದಲಾದವರು ನಟಿಸಿದ್ದಾರೆ.

ಇದೇ ವರ್ಷ ಡಿಸೆಂಬರ್ 15ರಂದು ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಬಿಡುಗಡೆಯಾಗಲಿದೆ ಎಂದು ಟೀಸರ್‌ನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT