ಗುರುವಾರ , ಮಾರ್ಚ್ 30, 2023
22 °C

ತೆಲುಗು ನಟ ನಾಗ ಶೌರ್ಯ ಫಾರಂ ಹೌಸ್‌ ಮೇಲೆ ದಾಳಿ: ₹ 60 ಲಕ್ಷ ನಗದು, ಚಿನ್ನಾಭರಣ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತೆಲುಗು ನಟ ನಾಗ ಶೌರ್ಯ ಅವರಿಗೆ ಸೇರಿದ ಪಾರಂ ಹೌಸ್‌ನಲ್ಲಿ ಜೂಜಾಡುತ್ತಿದ್ದ 20ಕ್ಕೂ ಹೆಚ್ಚು ಸೆಲೆಬ್ರಿಟಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಖಚಿತ ಮಾಹಿತಿ ಪಡೆದ ಹೈದರಾಬಾದ್‌ ಪೊಲೀಸರು ನಾಗ ಶೌರ್ಯ ಅವರ ಫಾರಂ ಹೌಸ್‌ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ₹ 60 ಲಕ್ಷ ನಗದು, ಚಿನ್ನಾಭರಣ, ಪೋಕರ್‌ ವಸ್ತುಗಳು, ಹಣ ಎಣಿಕೆ ಮಾಡುವ ಯಂತ್ರಗಳು ಸೇರಿದಂತೆ 30 ಮೊಬೈಲ್ ಹಾಗೂ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಬಂಧಿತರಲ್ಲಿ ಸಹ ನಟರು, ನಿರ್ಮಾಪಕರು ಹಾಗೂ ಸಿನಿಮಾ ತಂತ್ರಜ್ಞರು ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದು ಅವರ ಹೆಸರನ್ನು ಬಹಿರಂಗಪಡಿಸಿಲ್ಲ. 

ಪ್ರಕರಣದ ಮುಖ್ಯ ಆರೋಪಿಯಾಗಿರುವ ಸುಮನ್‌ ಗುಟ್ಟಾ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪಾರಂ ಹೌಸ್‌ನಲ್ಲಿ ಉದ್ಯಮಿಗಳು ಮತ್ತು ಸಿನಿಮಾ ರಂಗದವರನ್ನು ಸೇರಿಸಿ ಸುಮನ್ ಗುಟ್ಟಾ ಜೂಜು ಆಡಿಸುತ್ತಿದ್ದ ಎನ್ನಲಾಗುತ್ತಿದೆ.

ಸುಮನ್‌ ಗುಟ್ಟಾ ವಿರುದ್ಧ ಹಲವು ಕಡೆ ವಂಚನೆ ಪ್ರಕರಣಗಳು ದಾಖಲಾಗಿವೆ. ಇದೇ ಫಾರಂ ಹೌಸ್‌ನಲ್ಲಿ ಸೆಟಲ್‌ಮೆಂಟ್ ಕೂಡ ಮಾಡಿಸುತ್ತಿದ್ದ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ನಾಗ ಶೌರ್ಯ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ.

4 ದಿನಗಳ ಹಿಂದಷ್ಟೆ ನಾಗ ಶೌರ್ಯ ನಟನೆಯ 'ವರಡು ಕಾವಲೇನು' ಸಿನಿಮಾ ಬಿಡುಗಡೆ ಆಗಿದೆ. ಇನ್ನೂ ನಾಲ್ಕು ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿವೆ. ನಾಗ ಶೌರ್ಯ ಅವರ ಚಿಕ್ಕಪ್ಪ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು