ಮಹಿರ, ಗಿಲ್ಕಿ, ತಲೆದಂಡ ಹೀಗೆ ಪ್ರತಿ ಸಿನಿಮಾಗಳಲ್ಲೂ ವಿಶೇಷ ಪಾತ್ರಗಳ ಮೂಲಕ ಗಮನಸೆಳೆದಿರುವ ಚೈತ್ರಾ ಆಚಾರ್ ಈಗ ‘ಅಕಟಕಟ’ದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ನಾಗರಾಜ್ ಸೋಮಯಾಜಿ ನಿರ್ದೇಶನದ ಈ ಸಿನಿಮಾದಲ್ಲಿ ಚೈತ್ರಾ ಆಚಾರ್ ಜಾನಕಿ ಎಂಬ ಪಾತ್ರ ಪೋಷಣೆ ಮಾಡಲಿದ್ದಾರೆ. ಸದಾ ಖುಷಿ ಖುಷಿಯಿಂದ ಜೀವನವನ್ನು ಜೀವಿಸುವ.. ನೆಗೆಟಿವ್ ಬಿಟ್ಟು ಪಾಸಿಟಿವ್ ಬಗ್ಗೆ ಯೋಚಿಸುವ, ಮಧ್ಯಮ ವರ್ಗದ ಹುಡುಗಿಯಾಗಿ ಚೈತ್ರಾ ಬಣ್ಣ ಹಚ್ಚಲಿದ್ದಾರೆ. ಇಂಥ ನಾಯಕಿ ನಾಯಕನ ಬದುಕಿಗೆ ಎಂಟ್ರಿ ಕೊಟ್ಟಾಗ ಏನಾಗುತ್ತದೆ ಅನ್ನವುದೇ ಚೈತ್ರಾ ಆಚಾರ್ ಪಾತ್ರ.

ಸಂಚಾರಿ ವಿಜಯ್ ನಟಿಸಿದ್ದ ‘ಪುಕ್ಸಟ್ಟೆ ಲೈಫು’ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕ ನಾಗರಾಜ್ ಸೋಮಯಾಜಿ ಮೂಲತಃ ಛಾಯಾಗ್ರಾಹಕ. ರಂಗಭೂಮಿಯಲ್ಲಿಯೂ ಸಕ್ರಿಯರಾಗಿರುವ ಅವರು ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದರು. ಈಗ ‘ಅಕಟಕಟ’ ಸಿನಿಮಾಗೆ ಕಥೆಯನ್ನು ನಾಗರಾಜ್ ಅವರೇ ಬರೆದಿದ್ದಾರೆ. ಉಳಿದ ತಾರಾಗಣ ಇನ್ನಷ್ಟೇ ಗೊತ್ತಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.