ಭಾನುವಾರ, ಜನವರಿ 24, 2021
18 °C

ಮಾರ್ಚ್‌ 11ಕ್ಕೆ ತೆರೆ ಮೇಲೆ ಬರಲಿದ್ದಾನೆ ‘ರಾಬರ್ಟ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್‌ ಚಿತ್ರ ಮಾರ್ಚ್‌ 11ರ ಮಹಾಶಿವರಾತ್ರಿ ದಿನದಂದು ಬಿಡುಗಡೆಯಾಗಲಿದೆ. ತರುಣ್ ಸುಧೀರ್‌ ನಿರ್ದೇಶನದ ಈ ಚಿತ್ರ ಕಳೆದ ಬೇಸಿಗೆಯಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಲಾಗಿತ್ತು. ಆ ಚಿತ್ರದಲ್ಲಿ ಆಶಾ ಭಟ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ಫೇಸ್‌ಬುಕ್‌ನಲ್ಲಿ ಲೈವ್‌ಗೆ ಬಂದಿದ್ದ ನಟ ದರ್ಶನ್ ಸಿನಿಮಾ ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ಸಂತಸ ಹಂಚಿದ್ದಾರೆ. ಇದೇ ಲೈವ್‌ನಲ್ಲಿ ಒಟಿಟಿ ವೇದಿಕೆಯ ಕುರಿತು ಮಾತನಾಡಿರುವ ದರ್ಶನ್‌ ‘ನಾನು ಒಟಿಟಿಗೆ ದೊಡ್ಡ ಅಭಿಮಾನಿಯಲ್ಲ. ನನಗೆ ಜನರು ದೊಡ್ಡ ಪರದೆಯ ಮೇಲೆ ಸಿನಿಮಾ ನೋಡಿ ಎಂಜಾಯ್ ಮಾಡುವುದು ಇಷ್ಟವಾಗುತ್ತದೆ. ಸಿನಿಮಾಗಳಿಗೆ ನಿರ್ಮಾಪಕರು ತುಂಬಾನೇ ಹಣ ಹೂಡಿಕೆ ಮಾಡುತ್ತಾರೆ, ಆ ಹಣ ಮರಳಿ ಬರಬೇಕು ಎಂದರೆ ದೊಡ್ಡ ಪರದೆಯ ಮೇಲೆ ಸಿನಿಮಾ ಬಿಡುಗಡೆಯಾಗಬೇಕು’ ಎಂದಿದ್ದಾರೆ.

ಈ ವರ್ಷ ಕೊರೊನಾ ಕಾರಣದಿಂದ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇರಲು ನಿರ್ಧಾರ ಮಾಡಿದ್ದಾರೆ. ‘ನಾನು ಫೆಬ್ರುವರಿ 15 ರಿಂದ 18ರ ವರೆಗೆ ಬೆಂಗಳೂರಿನಲ್ಲಿ ಇರುವುದಿಲ್ಲ. ದಯವಿಟ್ಟು ಅಭಿಮಾನಿಗಳು ನನ್ನ ಮನೆಯ ಬಳಿ ಬಂದು ಗುಂಪು ಸೇರಬೇಡಿ. ಮೊದಲು ನಿಮ್ಮ ಕುಟುಂಬದ ಕಾಳಜಿ ಮಾಡಿ, ಸಾಧ್ಯವಾದರೆ ತೊಂದರೆಯಲ್ಲಿರುವ ನಿಮ್ಮ ನೆರೆಹೊರೆಯವರಿಗೆ ಸಹಾಯ ಮಾಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು